ಉಡುಪಿ : ಗಿರಿಬಳಗ (ರಿ.) ಕುಂಜಾರುಗಿರಿ ಇವರು ದೀಪಾವಳಿ ಹಬ್ಬದ ಪ್ರಯುಕ್ತ ಪ್ರಸ್ತುತಪಡಿಸುವ “ಛತ್ರಪತಿ ಶಿವಾಜಿ” ಕನ್ನಡ ಐತಿಹಾಸಿಕ ನಾಟಕದ ಪ್ರದರ್ಶನವು ದಿನಾಂಕ 25 ಅಕ್ಟೋಬರ್ 2025ರಂದು ಉಡುಪಿಯ ಶಾರದಾ ಕಲ್ಯಾಣ ಮಂಟಪ ರಸ್ತೆಯಲ್ಲಿರುವ ಐ. ವೈ. ಸಿ. ಸಭಾಂಗಣದಲ್ಲಿ ಸಂಜೆ ಘಂಟೆ 6.30ರಿಂದ ನಡೆಯಲಿದೆ.
ಖ್ಯಾತ ಸಾಹಿತಿ ಶಶಿರಾಜ್ ರಾವ್ ಕಾವೂರು ರಚಿಸಿರುವ ಈ ನಾಟಕದ ರಂಗ ಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನವನ್ನು ಗಣೇಶ್ ರಾವ್ ಎಲ್ಲೂರು ಮಾಡಿದ್ದಾರೆ. ಗಿರೀಶ್ ತಂತ್ರಿ ಉಡುಪಿ ಸಂಗೀತದಲ್ಲಿ ಸಹಕರಿಸಲಿದ್ದು, ಶಂಕರ್ ಬೆಳಲಕಟ್ಟೆ ಶಿವಮೊಗ್ಗ ಬೆಳಕು ಸಂಯೋಜನೆಯಲ್ಲಿ, ರಾಜು ಆಚಾರ್ಯ ಸಾಗರ ಹಾಗೂ ಭಾಸ್ಕರ ಆಚಾರ್ಯ ಸಾಗರ ವಸ್ತ್ರಾಲಂಕಾರದಲ್ಲಿ, ಜಗದೀಶ್ ಚೆನ್ನಂಗಡಿ ಉಡುಪಿ ಪ್ರಸಾದನದಲ್ಲಿ ಹಾಗೂ ಮಹೇಶ್ ಹೊನ್ನಾವರ ರಂಗಸಜ್ಜಿಕೆಯಲ್ಲಿ ಸಹಕರಿಸಲಿದ್ದಾರೆ. ಈ ನಾಟಕಕ್ಕೆ ಪ್ರವೇಶ ಉಚಿತವಾಗಿದೆ.

