ಮಂಗಳೂರು : ಶ್ರೀ ದುರ್ಗಾ ಪರಮೇಶ್ವರಿ ಸೇವಾ ಸಮಿತಿ ರಥಬೀದಿ ಮಂಗಳೂರು ಇವರ ವತಿಯಿಂದ ಕಲಾ ಸಂಗಮ ಕಲಾವಿದರು ಅಭಿನಯಿಸುವ ‘ಛತ್ರಪತಿ ಶಿವಾಜಿ’ ಅದ್ದೂರಿ ತುಳು ಚಾರಿತ್ರಿಕ ನಾಟಕ ಪ್ರದರ್ಶನವನ್ನು ದಿನಾಂಕ 10 ಮಾರ್ಚ್ 2025ರಂದು ಮಂಗಳೂರಿನ ರಥಬೀದಿಯಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕಕ್ಕೆ ಶಶಿರಾಜ್ ಕಾವೂರು ಇವರ ಕಥೆ ಸಂಭಾಷಣೆ, ಎ.ಕೆ. ವಿಜಯ್ (ಕೋಕಿಲ) ಇವರ ಸಂಗೀತ ಹಾಗೂ ವಿಜಯ್ ಕುಮಾರ್ ಕೊಡಿಯಾಲ್ ಬೈಲು ನಿರ್ದೇಶನ ಮಾಡಿರುತ್ತಾರೆ.