ಮೈಸೂರು : ಎನ್.ಇ.ಎಸ್. ಹವ್ಯಾಸಿ ರಂಗತಂಡ ಶಿವಮೊಗ್ಗ ಅರ್ಪಿಸುವ ರಾಷ್ಟ್ರದ ಖ್ಯಾತ ಬರಹಗಾರ ಆ್ಯಂಟನ್ ಚೆಕಾವ್ ರವರ ಸಣ್ಣ ಕಥೆಗಳನ್ನು ಆಧರಿಸಿದ ಡಾ. ಹೇಮಾಪಟ್ಟಣ ಶೆಟ್ಟಿ ವಿರಚಿತ ನಾಟಕ ‘ಚೆಕಾವ್ ಟು ಶಾಂಪೇನ್’ ಇದರ ಪ್ರದರ್ಶನವನ್ನು ದಿನಾಂಕ 27 ಜುಲೈ 2025ರಂದು ಸಂಜೆ 6-30 ಗಂಟೆಗೆ ಮೈಸೂರಿನ ನಟನ ರಂಗಶಾಲೆಯಲ್ಲಿ ಆಯೋಜಿಸಲಾಗಿದೆ.
ಡಾ. ಎನ್. ಕೆ. ಚಿದಾನಂದ ಸೊರಬ ಇವರು ನಿರ್ದೇಶನ ಮತ್ತು ರಂಗವಿನ್ಯಾಸ ಮಾಡಿದ್ದು, ಲಕ್ಷ್ಮಿ ಭದ್ರಾವತಿ ಪ್ರಸಾದನ ಮತ್ತು ವಸ್ತ್ರವಿನ್ಯಾಸ, ಹರಿಗೆ ಗೋಪಾಲ್ ಸ್ವಾಮಿ ಇವರು ಪರಿಕರ ಮತ್ತು ಬೆಳಕಿನ ವಿನ್ಯಾಸ ಹಾಗೂ ವಿನ್ಯಾಸ್ ಎನ್. ವೀಚಿ ಸಂಗೀತ ನಿರ್ವಹಣೆ ಮಾಡಿರುತ್ತಾರೆ.