ಮಂಡ್ಯ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಡ್ಯ, ಅರುವಿ ಟ್ರಸ್ಟ್ (ರಿ.) ಮಂಡ್ಯ, ದೃಶ್ಯ ಟ್ರಸ್ಟ್ (ರಿ.) ಮೇಲುಕೋಟೆ ಹಾಗೂ ಎಸ್.ಇ.ಟಿ. ಪಾಲಿಟೆಕ್ನಿಕ್ ಮೇಲುಕೋಟೆ ಇವರ ಸಹಯೋಗದಲ್ಲಿ 2025-26ನೇ ಸಾಲಿನ ‘ಚಿಗುರು’ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದಿನಾಂಕ 31 ಜುಲೈ 2025ರಂದು ಬೆಳಗ್ಗೆ 11-00 ಗಂಟೆಗೆ ಮೇಲುಕೋಟೆಯ ಎಸ್.ಇ.ಟಿ. ಪಾಲಿಟೆಕ್ನಿಕ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮವನ್ನು ಮಾನ್ಯ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಇವರ ಘನ ಉಪಸ್ಥಿತಿಯಲ್ಲಿ ಮಾನ್ಯ ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಇವರು ಉದ್ಘಾಟನೆ ಮಾಡಲಿದ್ದಾರೆ. ವಾದ್ಯ ಸಂಗೀತದಲ್ಲಿ ಕೆ.ಆರ್. ಪೇಟೆಯ ಲೋಹಿತ್ ಎಂ. ಮತ್ತು ತಂಡ, ಸುಗಮ ಸಂಗೀತದಲ್ಲಿ ಮಂಡ್ಯದ ತನ್ವಿ ಸಿ. ಮತ್ತು ತಂಡ, ಜನಪದ ಗೀತೆ ಮಂಡ್ಯದ ರಾಜೇಶ್ವರಿ ಮತ್ತು ತಂಡ, ಸಮೂಹ ನೃತ್ಯದಲ್ಲಿ ಮದ್ದೂರು ತನುಷಿ ಗೌಡ ಮತ್ತು ತಂಡ, ನಾಟಕ ಪ್ರದರ್ಶನ ಮಂಡ್ಯದ ಪೃಥ್ವಿರಾಜ್ ಕೆ.ಎಲ್. ಮತ್ತು ತಂಡ ಹಾಗೂ ಏಕಪಾತ್ರಾಭಿನಯದಲ್ಲಿ ಪಾಂಡವಪುರದ ಮೋನಿಷ್ ಎನ್. ಶೆಟ್ಟಿ ಮತ್ತು ತಂಡದವರು ಭಾಗವಹಿಸಲಿದ್ದಾರೆ.