ಶಿವಮೊಗ್ಗ : ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನೇತೃತ್ವದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಡಿಸೆಂಬರ್ ಮತ್ತು ಜನವರಿ ಮಾಹೆಯಲ್ಲಿ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಪ್ರಮಾಣ ವರ್ಷ ನಡೆಸುವ ಈ ಸಮ್ಮೇಳನ ನಮ್ಮ ಜಿಲ್ಲೆಯಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ನಿರಂತರ ನಡೆಸಿಕೊಂಡು ಬಂದಿರುವ ಹೆಗ್ಗಳಿಕೆ ನಮ್ಮದು ಎಂದು ಅಧ್ಯಕ್ಷರಾದ ಡಿ. ಮಂಜುನಾಥ ತಿಳಿಸಿದ್ದಾರೆ.
ಡಿಸೆಂಬರ್ ಕೊನೆಯ ವಾರದಲ್ಲಿ ಎಲ್ಲಾ ತಾಲೂಕು ಮಟ್ಟದಲ್ಲಿ ಸಮ್ಮೇಳನ ಏರ್ಪಡಿಸಲಾಗುವುದು. ಜನವರಿ ಮೊದಲ ವಾರ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಯಲಿದೆ. ನಂತರ ರಾಜ್ಯ ಮಟ್ಟದ ಸಮ್ಮೇಳನ ಏರ್ಪಡಿಸಲಾಗುವುದು. ಜಿಲ್ಲೆಯ ವ್ಯಾಪ್ತಿಯಲ್ಲಿರುವ ಪ್ರಾಥಮಿಕ, ಪ್ರೌಢಶಾಲಾ, ಪದವಿ ಪೂರ್ವ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸ್ವಂತ ಕವನ, ಕಥೆ, ಪ್ರಬಂಧ ಬರೆಯುತ್ತಿದ್ದರೆ, ಆಶುಭಾಷಣದಲ್ಲಿ ಆಸಕ್ತಿಯಿದ್ದರೆ ನಿಮಗೆ ಸಾಮೂಹಿಕ ವೇದಿಕೆ ಕಲ್ಪಿಸುವ ಉದ್ದೇಶದಿಂದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ.
ಈ ಸಮ್ಮೇಳನದಲ್ಲಿ ಭಾಗವಹಿಸಲು ಆಸಕ್ತಿಯಿರುವ ವಿದ್ಯಾರ್ಥಿಗಳು ತಮ್ಮ ಶಾಲಾ ಮುಖ್ಯಸ್ಥರು ಅಥವಾ ಪೋಷಕರ ಸಹಿಯೊಂದಿಗೆ ಹೆಸರು, ಓದುತ್ತಿರುವ ತರಗತಿ, ವಿಳಾಸ, ದೂರವಾಣಿ, ಆಸಕ್ತಿ, ಬರೆದಿರುವ ಪ್ರಕಾರಗಳನ್ನು ಬರೆದು ತಿಳಿಸಲು ಕೋರುತ್ತೇವೆ. ಕವನ, ಕಥೆ, ಪ್ರಬಂಧ ಬರೆದವರು, ಪುಸ್ತಕ ಪ್ರಕಟಿಸಿದವರು, ಬೇರೆ ಬೇರೆ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರ ಮಾಹಿತಿಗಳನ್ನು ಬರೆದು ತಿಳಿಸಬಹುದು.
ಆಸಕ್ತಿಯಿರುವವರು ಶಿವಮೊಗ್ಗ ತಾಲೂಕು ಡಿ. ಮಂಜುನಾಥ, ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಉಡುಗಿರಿ ನಿಲಯ, ಭಗೀರಥ ವೃತ್ತದ ಹತ್ತಿರ, ವಿನೋಬನಗರ, ಶಿವಮೊಗ್ಗ. 9449552795. ತೀರ್ಥಹಳ್ಳಿ ರೇಣುಕಾ ಹೆಗಡೆ : 9480010403, ಭದ್ರಾವತಿ ಸುಧಾಮಣಿ ವೆಂಕಟೇಶ : 9880070989, ಹೊಸನಗರ ರಾಘವೇಂದ್ರ ನಗರ : 9449494324, ಶಿಕಾರಿಪುರ ನರಸಿಂಹ ಸ್ವಾಮಿ :8296388380, ಸೊರಬ ಶಂಕರ್ ಶೇಟ್ : 9844163114, ಸಾಗರ : ಸದಾನಂದ ಶರ್ಮ :9482029149 ಆಯಾಯ ತಾಲೂಕು ವಿದ್ಯಾರ್ಥಿಗಳು ಆಯಾಯ ತಾಲೂಕು ಅಧ್ಯಕ್ಷರಲ್ಲಿ ಹೆಸರು ನೋಂದಣಿ ಮಾಡಿಸಲು ಡಿ. ಮಂಜುನಾಥ ಮನವಿ ಮಾಡಿದ್ದಾರೆ.
