ಕೋಲಾರ : ರಾಷ್ಟ್ರಪ್ರಶಸ್ತಿ ಪುರಸ್ಕೃತ ಮಕ್ಕಳ ಸಂಸ್ಥೆ ‘ರಂಗಕಹಳೆ’ ಬೆಂಗಳೂರು ಇದರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ‘ಮಕ್ಕಳ ರಂಗ ಉತ್ಸವ’ವನ್ನು ದಿನಾಂಕ 09 ನವೆಂಬರ್ 2025ರಂದು ಬೆಳಗ್ಗೆ 10-00 ಗಂಟೆಗೆ ಕೋಲಾರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ನಿಶ್ಚಲ ಎಂ., ರಕ್ಷಿತಾ, ಪೂಜ ಮತ್ತು ತಂಡದವರಿಂದ ಭರತನಾಟ್ಯ, ಅನಿಲ್ ಕುಮಾರ್ ಮತ್ತು ತಂಡದವರಿಂದ ಜನಪದ ಗೀತೆ, ಕಲಾಭಾರತಿ ನೃತ್ಯ ಮತ್ತು ಸಂಗೀತ ಶಾಲೆ, ಸಿದ್ಧಪ್ರಿಯಾ, ಯುಕ್ತ ರಾವ್, ಪಾವನಿ ಮತ್ತು ತಂಡದವರಿಂದ ಸಮೂಹ ನೃತ್ಯ, ಆರ್.ಕೆ. ಫಿಲಂ ಸ್ಟೂಡಿಯೋಸ್ ಇವರಿಂದ ಶ್ರೀ ಅಟಲ್ ಬಿಹಾರಿ ವಾಜಪೇಯಿರವರ ಜೀವನಾಧಾರಿತ ‘ಸಾಕ್ಷ್ಯಚಿತ್ರ’, ಸಿ. ಲಕ್ಷ್ಮಣ ಇವರ ನಿರ್ದೇಶನದ ‘ಕಲಾತ್ಮಕ ಚಲನಚಿತ್ರ ಕಾರಣಿಕ ಶಿಶು’ ಪ್ರದರ್ಶನ, ಕೋಲಾರದ ಶ್ರೀ ಜಯನಾಟ್ಯ ಕಲಾ ಅಕಾಡೆಮಿ ತಂಡದವರಿಂದ ‘ನೃತ್ಯ ವೈಭವ’, ಗೌರಿಶಂಕರ ಅಕಾಡೆಮಿ ಫಾರ್ ಕಲ್ಚರ್ ಅಂಡ್ ಸ್ಪೋರ್ಟ್ಸ್ ಟ್ರಸ್ಟ್ ಇವರಿಂದ ‘ಬೊಮ್ಮನಹಳ್ಳಿಯ ಕಿಂದರಿ ಜೋಗಿ’ ನಾಟಕ ಪ್ರಸ್ತುತಿ, ಬೆಂಗಳೂರಿನ ಧನಲಕ್ಷ್ಮಿ ನಾಟಕ ಮಂಡಳಿ ಇವರಿಂದ ‘ನನ್ನ ಗೋಪಾಲ’ನಾಟಕ ಪ್ರದರ್ಶನಗೊಳ್ಳಲಿದೆ.

