ಉಡುಪಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆ ಅಂಗವಾಗಿ ಬ್ರಹ್ಮಗಿರಿಯ ಜಿಲ್ಲಾ ಬಾಲಭವನದಲ್ಲಿ ದಿನಾಂಕ 19-10-2023ರಂದು ಬೆಳಗ್ಗೆ 10ಕ್ಕೆ 9ರಿಂದ 16 ವರ್ಷದ ಒಳಗಿನ ಮಕ್ಕಳಿಗೆ ಸೃಜನಾತ್ಮಕ ಪ್ರದರ್ಶನ ಕಲೆ (ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ, ಕರ್ನಾಟಕ ಮತ್ತು ಹಿಂದು ಶಾಸ್ತ್ರೀಯ ಸಂಗೀತ ಹಾಗೂ ಸುಗಮ ಸಂಗೀತ), ವಿಜ್ಞಾನದಲ್ಲಿ ನೂತನ ಆವಿಷ್ಕಾರ, ಚಿತ್ರಕಲಾ ಸ್ಪರ್ಧೆ, ವಾದ್ಯ ಸಂಗೀತ (ತಬಲಾ, ಮೃದಂಗ, ಕೀಬೋರ್ಡ್, ಕೊಳಲು, ಡೊಳ್ಳು ಮತ್ತು ನಗಾರಿ) ಹಾಗೂ ಅಂಗವಿಕಲ, ಬುಡಕಟ್ಟು ಪ್ರದೇಶದ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಈ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳ ವಿವರ ಈ ರೀತಿ ಇದೆ. ತಬಲದಲ್ಲಿ ಉಡುಪಿ ವಳಕಾಡಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಗೌರೀಶ್, ಕೊಳಲಿನಲ್ಲಿ ಎಸ್.ವಿ. ಗಂಗೊಳ್ಳಿಯ ಶಾಮ್ ಜಿ.ಎನ್. ಪೂಜಾರಿ ಮತ್ತು ಉಡುಪಿ ಮೌಂಟ್ ರೋಸರಿ ಸ್ಕೂಲಿನ ಜಾನ್ವಿ ಮತ್ತು ಸ್ಯಾಕ್ಸಪೋನ್ ವಾದನದಲ್ಲಿ ಉಡುಪಿ ವಳಕಾಡಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ತನ್ವಿ, ಭರತನಾಟ್ಯದಲ್ಲಿ ಕುಂದಾಪುರದ ವಿ.ಕೆ.ಆರ್. ಶಾಲೆಯ ಗಾರ್ಗಿ ದೇವಿ ಮತ್ತು ಉಡುಪಿ ಕುಂಜಾರುಗಿರಿ ಆನಂದ ತೀರ್ಥ ಶಾಲೆಯ ಶಾರ್ವರಿ, ಸಂಗೀತದಲ್ಲಿ ಉಡುಪಿ ಕುಂಜಾರುಗಿರಿ ಆನಂದ ತೀರ್ಥ ಶಾಲೆಯ ಪ್ರಣವ್ ಅಡಿಗ ಮತ್ತು ಉಡುಪಿಯ ಮಾಧವ ಕೃಪ ಶಾಲೆಯ ಸ್ವಸ್ತಿ ಎಮ್. ಭಟ್, ವಿಜ್ಞಾನ ಮಾದರಿಯಲ್ಲಿ ಉಡುಪಿ ಟಿ.ಎ.ಪೈ ಇ.ಎಮ್.ಎಚ್.ಎಸ್. ಶಾಲೆಯ ಯಶಸ್ ಶೆಟ್ಟಿ ಮತ್ತು ಕುಂದಾಪುರ ತೆಕ್ಕಟ್ಟೆಯ ಸೇವಾ ಸಂಗಮ ವಿದ್ಯಾ ಕೇಂದ್ರದ ಸಾನಿಧ್ಯ ಆರ್. ಪೂಜಾರಿ ಹಾಗೂ ಚಿತ್ರಕಲೆ ಸ್ಪರ್ಧೆಯಲ್ಲಿ ಬ್ರಹ್ಮಾವರ ಜಿ.ಎಮ್. ವಿದ್ಯಾನಿಕೇತನದ ನಿಹಾರ್, ಉಡುಪಿ ಟಿ.ಎ.ಪೈ ಇ.ಎಮ್.ಎಚ್.ಎಸ್. ಶಾಲೆಯ ಚಿರಾಗ್ ವಿ. ಶೆಟ್ಟಿ, ಕಾರ್ಕಳ ಜ್ಞಾನ ಸುಧಾದ ಆದಿತ್ಯ ಎನ್. ನಾಯಕ್ ಮತ್ತು ಶಂಕರಪುರ ಸೈಂಟ್ ಜಾನ್ಸ್ ಶಾಲೆಯ ಈಶಾಂತ್ ಎಸ್. ಆಚಾರ್ಯ.