ಮಂಜೇಶ್ವರ: ಮಂಜೇಶ್ವರದ ಯುವ ಸಾಹಿತಿ ಗಣೇಶ್ ಪ್ರಸಾದ್ ಮಂಜೇಶ್ವರ ಇವರ ‘ಚಿಲ್ಲಾ’ ಕಥಾ ಸಂಕಲನವು 22 ಡಿಸೆಂಬರ್ 2024ರಂದು ಅಪರಾಹ್ನ ಘಂಟೆ 2.30ಕ್ಕೆ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಭವನ ಗಿಳಿವಿಂಡುವಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಹಿರಿಯ ಕವಿ ಹಾಗೂ ಪತ್ರಕರ್ತರಾದ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮಲ್ಲಿ ಹಿರಿಯ ರಂಗಕರ್ಮಿ ಹಾಗೂ ಚಲನಚಿತ್ರ ನಿರ್ದೇಶಕರಾದ ಕಾಸರಗೋಡು ಚಿನ್ನಾ ಪುಸ್ತಕ ಲೋಕಾರ್ಪಣೆಗೊಳಿಸಲಿದ್ದಾರೆ. ಪತ್ರಕರ್ತ ಹಾಗೂ ಲೇಖಕರಾದ ವಿಕ್ರಂ ಕಾಂತಿಕೆರೆ ಪುಸ್ತಕ ಪರಿಚಯ ಮಾಡಲಿದ್ದು, ಲೇಖಕರಾದ ಪ್ರೊ .ಪಿ. ಎನ್. ಮೂಡಿತ್ತಾಯ, ಕಲ್ಲಚ್ಚು ಪ್ರಕಾಶನದ ಪ್ರಕಾಶಕ ಹಾಗೂ ಸಾಹಿತಿಗಳಾದ ಮಹೇಶ ಆರ್. ನಾಯಕ್, ಖ್ಯಾತ ಲೇಖಕಿ ಡಾ. ಮಹೇಶ್ವರಿ ಯು., ನಿವೃತ್ತ ಶಿಕ್ಷಕಿ ಗಾಯಕಿ ಪ್ರಭಾ ನಾಯಕ್, ಲೇಖಕ, ಅಧ್ಯಾಪಕ ಹಾಗೂ ರಂಗಕರ್ಮಿಗಳಾದ ದಿವಾಕರ ಬಲ್ಲಾಳ್ ಮೊದಲಾದವರು ಉಪಸ್ಥಿತರಿರುವರು.
Subscribe to Updates
Get the latest creative news from FooBar about art, design and business.