ಹೊಸಂಗಡಿ : ಬಾಕುಡ ಸಮಾಜ ಸೇವಾ ಸಮಿತಿ (ರಿ.) ಕೇರಳ – ಕರ್ನಾಟಕ ಕೇಂದ್ರ ಸಮಿತಿಯ ನೇತೃತ್ವದಲ್ಲಿ ಹಾಗೂ ರಂಗಚೇತನ (ರಿ) ಕಾಸರಗೋಡು ಇದರ ಸಹಬಾಗಿತ್ವದಲ್ಲಿ ಮೇ ತಿಂಗಳ 13 ಮತ್ತು 14ರಂದು ಮಂಜೇಶ್ವರ ವೆಲ್ಪೇರ್ ಶಾಲೆಯಲ್ಲಿ ಜರಗಲಿರುವ ದ್ವಿದಿನ ಸಹವಾಸ ಶಿಬಿರದ ಆಮಂತ್ರಣ ಪತ್ರಿಕೆಯ ಬಿಡುಗಡೆ ಅಂಗಡಿಪದವು ನಿತ್ಯಾನಂದ ಭಜನಾ ಮಂದಿರದಲ್ಲಿ ಜರಗಿತು.
ನಿತ್ಯಾನಂದ ಭಜನಾ ಮಂದಿರದ ಕೋಶಾಧಿಕಾರಿ ಹಿರಿಯ ಧಾರ್ಮಿಕ ಮುಂದಾಳು ಚಂದ್ರಶೇಖರ ಬಿ.ಎಸ್.ಎನ್.ಎಲ್. ಅಂಗಡಿಪದವು ಬಿಡುಗಡೆ ಮಾಡಿದರು. ಕೇಂದ್ರ ಸಮಿತಿಯ ಅಧ್ಯಕ್ಷರಾದ ವಿಜಯ್ ಪಂಡಿತ್ ಮಂಗಲ್ಪಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ ,”ಶಿಬಿರಗಳು ಮಕ್ಕಳ ನೈಜ ಪ್ರತಿಭೆಯ ಅನಾವರಣದ ವೇದಿಕೆಯಾಗಿದ್ದು ಇದರ ಪ್ರಯೋಜನವನ್ನು ಎಲ್ಲರೂ ಉಪಯೋಗಿಸಿಕೊಳ್ಳಬೇಕೆಂದು” ತಿಳಿಸಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿಯ ಕೋಶಾಧಿಕಾರಿ ರಾಮ ಕುಳೂರು, ಚಿಣ್ಣರ ಚಿಲುಮೆ ಸಂಘಟಕ ಸಮಿತಿಯ ಕೋಶಾಧಿಕಾರಿ ಕೃಷ್ಣ ಶಕ್ತಿನಗರ, ಮಹಿಳಾ ಸಮಿತಿಯ ಅಧ್ಯಕ್ಷರಾದ ಸುಮಂಗಳ ಪೊಸೋಟ್, ಸೀತಾರಾಮ ಅಂಗಡಿಪದವು, ಏಕಾನಂದ ಮಂಗಳೂರು, ಹರೀಶ್ ಮಾಸ್ತರ್ ಅಂಗಡಿಪದವು, ಬೇಬಿ ತಚ್ಚನಿ, ಪ್ರಿಜ್ಜು ಬಳ್ಳಾರ್, ಸುರೇಶ್ ಮಂಗಲ್ಪಾಡಿ, ಮುರುಗೇಶ್ ಪಚ್ಲಂಪಾರೆ, ಪ್ರವೀಣ್ ಎಸ್ ಕೊಡೆಂಚಿರಿ, ಜಯ ಪ್ರಕಾಶ್ ಉದ್ಯಾವರ ಗುತ್ತು, ಬಾಲಕೃಷ್ಣ ಅಡ್ಕ, ನವೀನ್ ಸೋಂಕಾಲ್, ರಘು ರಾಮ್ ಛತ್ರಂಪಳ್ಳ ಮೊದಲಾದವರು ಉಪಸ್ಥಿತರಿದ್ದರು. ಶಿಬಿರದ ನಿರ್ದೇಶಕರಾದ ಅಶೋಕ್ ಕೊಡ್ಲಮೊಗರು ಶಿಬಿರದ ಬಗ್ಗೆ ಮಾಹಿತಿಯನ್ನು ನೀಡಿದರು. ಕೇಂದ್ರ ಸಮಿತಿಯ ಪ್ರದಾನ ಕಾರ್ಯದರ್ಶಿ ಪವನ್ ಹೊಸಂಗಡಿ ಸ್ವಾಗತಿಸಿ, ಚಿಣ್ಣರ ಚಿಲುಮೆ ಸಂಘಟಕ ಸಮಿತಿಯ ಕಾರ್ಯದರ್ಶಿ ರಾಜೇಶ್ ಕೊಡ್ಲಮೊಗರು ವಂದಿಸಿದರು.