ಕುಂದಾಪುರ: ಕೊಮೆ ತೆಕ್ಕಟ್ಟೆಯ ಯಶಸ್ವೀ ಕಲಾವೃಂದ ‘ಸಿನ್ಸ್ 1999 ಶ್ವೇತಯಾನ-72’ ಕಾರ್ಯಕ್ರಮದಡಿಯಲ್ಲಿ ಹಟ್ಟಿಯಂಗಡಿ ಮಾರಲದೇವಿ ದೇಗುಲದಲ್ಲಿ ಶರನ್ನವರಾತ್ರಿಯ 8ನೇ ದಿನದ ಅಂಗವಾಗಿ ‘ಯಕ್ಷ-ಗಾನ-ವೈಭವ’ ಕಾರ್ಯಕ್ರಮವು ದಿನಾಂಕ 10 ಅಕ್ಟೋಬರ್ 2024ರಂದು ನಡೆಯಿತು.
ಕಾರ್ಯಕ್ರಮ ನೀಡಿದ ತಂಡವನ್ನು ಗೌರವಿಸಿ ಮಾತನಾಡಿದ ದೇವಳದ ಪ್ರಧಾನ ಅರ್ಚಕ ಮಂಜುನಾಥ ಭಟ್ “ಸಾಂಸ್ಕೃತಿಕ ಕಾರ್ಯಕ್ರಮಗಳು ಧಾರ್ಮಿಕ ಕಾರ್ಯಕ್ರಮದ ಒಂದು ಅಂಗ. ಅದರಲ್ಲೂ ಚಿಣ್ಣರ ಯಕ್ಷ ಗಾಯನ ನೆರೆದ ಸಮಸ್ತರನ್ನೂ ಆಕರ್ಷಿಸುವ ಕಾರ್ಯಕ್ರಮ. ಅಲ್ಲದೇ ಯಶಸ್ವೀ ಕಲಾವೃಂದಕ್ಕೆ ಕಾರ್ಯಕ್ರಮ ದೊರೆತರೆ ಮಕ್ಕಳ ಪ್ರತಿಭೆಗೆ ಕೊಡುವ ಪ್ರೋತ್ಸಾಹ. ಈ ಪ್ರೋತ್ಸಾಹ ನಮಗೆ ಸಾರ್ಥಕತೆ ನೀಡಿದೆ.” ಎಂದರು.
ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ರಾಹುಲ್ ಕುಂದರ್ ಕೋಡಿ, ಕಿಶನ್ ಪೂಜಾರಿ ಬಾಳೆಹಿತ್ಲು, ಪವನ್ ಆಚಾರ್, ಪೂಜಾ ಆಚಾರ್, ಪಂಚಮಿ ವೈದ್ಯ, ಹರ್ಷಿತಾ ಅಮೀನ್, ರಾಹುಲ್ ಅಮೀನ್, ರಾಹುಲ್ ಕುಂದರ್ ಕೋಡಿ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.