ಬೆಂಗಳೂರು : ವಿಜಯನಗರ ಬಿಂಬ (ರಿ.) ರಂಗ ಶಿಕ್ಷಣ ಕೇಂದ್ರ, ಮಕ್ಕಳ ವಿಭಾಗದ ವತಿಯಿಂದ ಚಿಣ್ಣರ ರಂಗ ಸಂಕ್ರಾಂತಿ ಸಮಾರಂಭವನ್ನು ದಿನಾಂಕ 03 ಜನವರಿ 2025ರಂದು ಸಂಜೆ 6-00 ಗಂಟೆಗೆ ಬೆಂಗಳೂರಿನ ಜೆ.ಸಿ. ರೋಡ್, ರವೀಂದ್ರ ಕಲಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಈ ಸಮಾರಂಭದಲ್ಲಿ 2 ನಾಟಕಗಳ ಉತ್ಸವ ಮತ್ತು ಶ್ರೀ ಕೃಷ್ಣಮೂರ್ತಿ ಬಿಳಿಗೆರೆಯವರಿಗೆ ಸನ್ಮಾನ ಮಾಡಲಾಗುವುದು.
ಡಾ. ಎಸ್.ವಿ. ಕಶ್ಯಪ್ ರಚಿಸಿರುವ ಡಾ. ಸುಷ್ಮಾ ಎಸ್. ವಿ. ಇವರ ನಿರ್ದೇಶನದಲ್ಲಿ ‘ಋಷ್ಯಮೂಕ’ ಮತ್ತು ಡಾ. ಎಸ್.ವಿ. ಕಶ್ಯಪ್ ಇವರು ರಚಿಸಿ ನಿರ್ದೇಶನ ಮಾಡಿರುವ ‘ಕೃಬು’ ಎಂಬ ನಾಟಕಗಳು ಪ್ರದರ್ಶನಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ 9844152967, 9845265967, 9845734967, 9844017881, 9880033018.