ಮಂಗಳೂರು : ಸಮುದಾಯ ಮಂಗಳೂರು, ಭಗತ್ ಸಿಂಗ್ ಮೆಮೊರಿಯಲ್ ಟ್ರಸ್ಟ್ (ರಿ.) ಪಂಜಿಮೊಗರು ಮತ್ತು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಪಂಜಿಮೊಗರು ಇವರ ಸಂಯುಕ್ತ ಆಶ್ರಯದಲ್ಲಿ ‘ಚಿಣ್ಣರ ಸಂಭ್ರಮ 2025’ ಬೇಸಿಗೆ ರಜಾ ಶಿಬಿರವನ್ನು ದಿನಾಂಕ 13 ಏಪ್ರಿಲ್ 2025ರಿಂದ 16 ಏಪ್ರಿಲ್ 2025ರವೆರೆಗೆ ಪಂಜಿಮೊಗರು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಉಚಿತ ಶಿಬಿರದಲ್ಲಿ 4ನೇ ತರಗತಿ ಮೇಲ್ಪಟ್ಟ ಯಾವುದೇ ಶಾಲೆಯ ಮಕ್ಕಳು ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ 9448427787, 8050107203 ಮತ್ತು 7795309161 ಸಂಖ್ಯೆಯನ್ನು ಸಂಪರ್ಕಿಸಿರಿ.