ಮಂಗಳೂರು : ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಅಪರೇಟಿವ್ ಸೊಸೈಟಿ ಲಿ., ಇದರ ವಜ್ರಮಹೋತ್ಸವ ಮತ್ತು ಸ್ಥಾಪಕರ ದಿನಾಚರಣೆ ಪ್ರಯುಕ್ತ ‘ಚಿತ್ರ ಸಿಂಚನ -2025’ ಭಾವಚಿತ್ರ ಬಿಡಿಸುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. 8ನೇ ತರಗತಿಯಿಂದ ದ್ವಿತೀಯ ಪಿ.ಯು.ಸಿ.ವರೆಗೆ ಕಿರಿಯರ ವಿಭಾಗ ಮತ್ತು ಹಿರಿಯರ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು, ಹೆಚ್ಚಿನ ಮಾಹಿತಿಗಾಗಿ 0824 2451320, 9972644237 ಮತ್ತು 9845220198 ಸಂಖ್ಯೆಯನ್ನು ಸಂಪರ್ಕಿಸಿರಿ.
ಸೂಚನೆಗಳು:
• A3 ಸೈಜ್ ಡ್ರಾಯಿಂಗ್ ಶೀಟ್.
• ವಾಟರ್ ಕಲರ್ ಅಥವಾ ಅಕ್ರಿಲಿಕ್ ಕಲರ್ ಬಳಸಬಹುದು.
• ನೈಜವಾಗಿ ಬಿಡಿಸಿದ ಬಹುವರ್ಣದ ಚಿತ್ರಗಳಾಗಿರಬೇಕು.
• ಸೃಜನಶೀಲತೆ, ಬಣ್ಣ ಸಂಯೋಜನೆ, ಅಚ್ಚುಕಟ್ಟಾಗಿರುವಿಕೆಗೆ ಆದ್ಯತೆ ನೀಡಲಾಗುವುದು.
• ದಿನಾಂಕ 31-08-2025ರೊಳಗೆ ತಾವು ಬಿಡಿಸಿದ ಚಿತ್ರದಲ್ಲಿ ತಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ವಿಭಾಗ ನಮೂದಿಸಿ ಈ ಮೇಲೆ ನೀಡಿರುವ ವಿಳಾಸಕ್ಕೆ ಕಳುಹಿಸಿಕೊಡಬೇಕು.
• ದಿನಾಂಕ 08-09-2025ರಂದು ಸೋಮವಾರಿ ಸಂಸ್ಥಾಪಕರ ಜನ್ಮದಿನದಂದು ಅಂತಿಮ ಸುತ್ತಿಗೆ ಆಯ್ಕೆಯಾದ ಎರಡು ವಿಭಾಗದ ತಲಾ 5 ಮಂದಿಗೆ LIVE ART ನಡೆಸಿ ವಿಜೇತರಿಗೆ ಪ್ರಶಸ್ತಿ ಮತ್ತು ನಗದು ಪುರಸ್ಕಾರ ನೀಡಲಾಗುವುದು.
• ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.