ಬೆಂಗಳೂರು : ‘ಸಮಷ್ಟಿ’ ಅಭಿನಯಿಸುವ 3 ಮೆಟಾ ಪ್ರಶಸ್ತಿ ವಿಜೇತ ‘ಚಿತ್ರಪಟ’ ನಾಟಕ ಪ್ರದರ್ಶನವನ್ನು ದಿನಾಂಕ 04 ಸೆಪ್ಟೆಂಬರ್ 2025ರಂದು ಸಂಜೆ 7-30 ಗಂಟೆಗೆ ಬೆಂಗಳೂರಿನ ರಂಗಶಂಕರದಲ್ಲಿ ಹಮ್ಮಿಕೊಳ್ಳಲಾಗಿದೆ.
ರಚನೆ : ಡಾ. ಎಚ್.ಎಸ್. ವೆಂಕಟೇಶ ಮೂರ್ತಿ
ಸಂಗೀತ ಸಂಯೋಜನೆ : ಗಜಾನನ ಹೆಗಡೆ
ವಸ್ತ್ರ ವಿನ್ಯಾಸ ಹಾಗೂ ನೃತ್ಯ ಸಂಯೋಜನೆ : ಶ್ವೇತಾ ಶ್ರೀನಿವಾಸ್
ಬೆಳಕು : ರವೀಂದ್ರ ಪೂಜಾರಿ
ವಿನ್ಯಾಸ ಹಾಗೂ ನಿರ್ದೇಶನ : ಮಂಜುನಾಥ ಎಲ್. ಬಡಿಗೇರ
2015ಕ್ಕೆ ‘ಚಿತ್ರಪಟ’ ನಾಟಕ ಕಟ್ಟಿದ್ದು, 2025ಕ್ಕೆ ಸತತ 10 ವರ್ಷಗಳು. ಈ ನಾಟಕದ ಪ್ರದರ್ಶನವನ್ನು ನಿರಂತರವಾಗಿ ಸಮಷ್ಟಿ ರಂಗತಂಡದಿಂದ ಮಾಡುತ್ತಾ ಬಂದಿದ್ದು, ಈ ನಾಟಕಕ್ಕೆ 2015ರಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮೆಟಾ ಪ್ರಶಸ್ತಿ – ಉತ್ತಮ ನಟಿ ಹಾಗೂ ಉತ್ತಮ ವಸ್ತ್ರ ವಿನ್ಯಾಸಕಿ ವಿಭಾಗಕ್ಕೆ ದೊರೆತಿದೆ.
ಸೀತೆಯಾಗಿ ನಾನು ಪ್ರತಿ ಪ್ರದರ್ಶನದಿಂದ ಪ್ರದರ್ಶನಕ್ಕೆ ಹೊಸ ಹೊಸ ಹೊಳಹುಗಳನ್ನು ಕಂಡುಕೊಳ್ಳುತ್ತ, ಪಾತ್ರದ ಅಂತರಾಳವನ್ನು ಅನ್ವೇಷಿಸಲು, ನಟನಾಭ್ಯಾಸಿಯಾಗಿ ನನ್ನನ್ನು ಇನ್ನಷ್ಟು ಹುರಿಗೊಳಿಸಿಕೊಳ್ಳಲು, ಸ್ಫೂರ್ತಿ ಪಡೆದುಕೊಳ್ಳಲು, ಈ ಚಿತ್ರಪಟ ನಾಟಕ ನನಗೆ ಸಹಕಾರಿಯಾಗಿದೆ, ಹುಮ್ಮಸ್ಸನ್ನ ನೀಡುತ್ತಲೇ ಇರುತ್ತದೆ. ನಾಟಕ ಪ್ರದರ್ಶನಗಳನ್ನು ಕಾಣಬೇಕಾದರೆ ಆಯೋಜಕರ ಸಹಕಾರ ಹಾಗೂ ಪ್ರೇಕ್ಷಕರ ಉಪಸ್ಥಿತಿ ಮುಖ್ಯ. ಹಾಗಾಗಿ ಈ ಮೂಲಕ ನಿಮ್ಮೆಲ್ಲರನ್ನು ವೈಯಕ್ತಿಕವಾಗಿ ಆಹ್ವಾನಿಸುತ್ತಿದ್ದೇನೆ. ದಯಮಾಡಿ ನಾಳೆ ಸಂಜೆಯ ಪ್ರದರ್ಶನಕ್ಕೆ ಬನ್ನಿ – ನಟಿ ಶ್ವೇತಾ ಶ್ರೀನಿವಾಸ್