ಮಂಗಳೂರು: ತಮ್ಮ ಸಣ್ಣಕತೆಗಳ ಮೂಲಕ ಆಧುನಿಕ ಕನ್ನಡ ಕಥಾಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು ಯಶವಂತ ಚಿತ್ತಾಲ. ಅವರೊಬ್ಬ ಮಹತ್ವದ ಲೇಖಕ. ನವ್ಯ ಸಾಹಿತ್ಯದ ಪ್ರಮುಖ ಕತೆಗಾರ ಚಿತ್ತಾಲರು ಕತೆ ಹೇಳುವುದರಲ್ಲಿ ಸಿದ್ಧಹಸ್ತರು. ‘ಚಿತ್ತಾಲರ ಮುದ್ರೆ ಇರುವ ಅವರ ಬರವಣಿಗೆಯು ಕತೆ ಕಾದಂಬರಿಗಳಿಗೆ ಮಾತ್ರವಲ್ಲ. ಅವರ ಪ್ರಬಂಧ, ಲಬಸಾ (ಲಯಬದ್ದ ಸಾಲುಗಳು) ಕವಿತೆಗಳಲ್ಲಿಯೂ ಹರಡಿದೆ. ಈ ಅಗ್ರಮಾನ್ಯ ಲೇಖಕರ ಭಾವಚಿತ್ರವು ಮಂಗಳೂರು, ಶಕ್ತಿ ನಗರದ ವಿಶ್ವ ಕೊಂಕಣಿ ಕೀರ್ತಿ ಮಂದಿರದಲ್ಲಿ ಜೂನ್ 10ರಂದು ಅನಾವರಣಗೊಳ್ಳಲಿದೆ.
ಬನ್ನಿ, ಸಂಜೆ 4ರಿಂದ 6.30ವರೆಗೆ ಬಿಡುವು ಮಾಡಿಕೊಳ್ಳಿ. ಕನ್ನಡ ಕಂಡ ಈ ಮಹತ್ವದ ಬರಹಗಾರರನ್ನು ಸ್ಮರಿಸಿಕೊಳ್ಳೋಣ. ವಿಶ್ವ ಕೊಂಕಣಿ ಕೇಂದ್ರ ಎಲ್ಲ ಕನ್ನಡ ಸಾಹಿತ್ಯ ಪ್ರೇಮಿಗಳನ್ನು ಆಹ್ವಾನಿಸುತ್ತಿದೆ.
ನಮ್ಮೊಂದಿಗೆ ಜಯಂತ ಕಾಯ್ಕಿಣಿ ಮತ್ತು ವಿವೇಕ ಶಾನಭಾಗರೂ ಇದ್ದು, ಚಿತ್ತಾಲರ ವ್ಯಕ್ತಿತ್ವ ಮತ್ತು ಬರಹಗಳನ್ನು ಮೆಲುಕು ಹಾಕುತ್ತಾ ಅವರೊಡನೆಯ ಒಡನಾಟದ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.