ಮಂಗಳೂರು: ಸಂಗೀತ ಪರಿಷತ್ ಮಂಗಳೂರು ಮತ್ತು ಭಾರತೀಯ ವಿದ್ಯಾಭವನ ಮಂಗಳೂರು ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಮಂಗಳೂರು, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಸಂಗೀತಾಭ್ಯಾಸಿಗಳಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಹದಿನೈದು ವರ್ಷಗಳಿಗಿಂತ ಕೆಳಗಿನವರು ಜೂನಿಯರ್ ವಿಭಾಗದಲ್ಲಿ ಹಾಗೂ ಇಪ್ಪತ್ತು ವರ್ಷಗಳಿಗಿಂತ ಕೆಳಗಿನವರು ಸೀನಿಯರ್ ವಿಭಾಗದಲ್ಲಿ ಸ್ಪರ್ಧಿಸಬಹುದು. ಎರಡೂ ಸ್ಪರ್ಧೆಗಳು 20 ಅಕ್ಟೋಬರ್ 2024ರಂದು ಪಾಂಡೇಶ್ವರದಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ನಡೆಯಲಿದೆ.
ಅರ್ಜಿ ಸಲ್ಲಿಸಲು 15 ಅಕ್ಟೋಬರ್ 2024 ಕೊನೆಯ ದಿನವಾಗಿದ್ದು, ವಿಜೇತರನ್ನು ನಗದು ಒಳಗೊಂಡಿರುವ ಬಹುಮಾನದೊಂದಿಗೆ ಮಂಗಳೂರು ಸಂಗೀತೋತ್ಸವದಲ್ಲಿ ಗೌರವಿಸಲಾಗುವುದು.
ಅರ್ಜಿಗಳನ್ನು ಸಂಗೀತ ಪರಿಷತ್ ಮಂಗಳೂರು, 12-1-33, ಸಿಂಧೂರ, ನ್ಯೂಫೀಲ್ಡ್ ರಸ್ತೆ, ಮಹಾಮಾಯ ದೇವಸ್ಥಾನದ ಹತ್ತಿರ, ರಥಬೀದಿ, ಮಂಗಳೂರು-575001 ಅಥವಾ ಇ-ಮೈಲ್ ವಿಳಾಸ [email protected] ಗೆ ಕಳುಹಿಸಿಕೊಡಬೇಕು. ಅರ್ಜಿ ನಮೂನೆ ಸಂಗೀತ ಪರಿಷತ್ ನ ಫೇಸ್ಟುಕ್ ಖಾತೆಯಲ್ಲಿ ಲಭ್ಯವಿದೆ.
Subscribe to Updates
Get the latest creative news from FooBar about art, design and business.
Previous Articleಮಂಜನಾಡಿಯಲ್ಲಿ ಉದ್ಘಾಟನೆಗೊಂಡ ಯಕ್ಷಗಾನ ನಾಟ್ಯ ತರಗತಿ
Related Posts
Comments are closed.