ಮಂಗಳೂರು : ಶರಧಿ ಪ್ರತಿಷ್ಠಾನ (ರಿ.) ಮಂಗಳೂರು ಆಯೋಜಿಸುವ ಪುಟಾಣಿಗಳ ಕೈಯಿಂದ ‘ಮಣ್ಣಿನ ಗಣಪತಿ ಸ್ಪರ್ಧೆ’ಯನ್ನು ದಿನಾಂಕ 27 ಆಗಸ್ಟ್ 2025ರಂದು ಬೆಳಿಗ್ಗೆ 10-00 ಗಂಟೆಯಿಂದ ಮಂಗಳೂರಿನ ಸೌಟ್ಸ್ ಮತ್ತು ಗೈಡ್ಸ್ ಭವನ ಲಾಲ್ಭಾಗ್ ಇಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸ್ಪರ್ಧೆಯು 1ರಿಂದ 4ನೇ ತರಗತಿ, 5ರಿಂದ 7ನೇ ತರಗತಿ ಮತ್ತು 8ರಿಂದ 10ನೇ ತರಗತಿ ಮೂರು ವಿಭಾಗದಲ್ಲಿ ನಡೆಯಲಿದ್ದು, ನೋಂದಾವಣೆ 8073214624 ಸಂಖ್ಯೆಯನ್ನು ವಾಟ್ಸಾಪ್ ಮೂಲಕ ಸಂಪರ್ಕಿಸಿರಿ.
ನಿಯಮಗಳು ಮತ್ತು ಮಾರ್ಗಸೂಚಿಗಳು :
ಮಣ್ಣಿನಿಂದಲೇ ಗಣಪನ ಆಕೃತಿ ತಯಾರಿಸಬೇಕು (ಸ್ಪರ್ಧಾ ಪ್ರಾಯೋಜಕರೇ ಮಣ್ಣನ್ನು ನೀಡುತ್ತಾರೆ / ಸ್ಪರ್ಧಿಗಳೇ ಮಣ್ಣನ್ನು ತರಲು ಅವಕಾಶವಿದೆ)
ನೈಸರ್ಗಿಕ ಬಣ್ಣಗಳು : ರಾಸಾಯನಿಕ ಬಣ್ಣಗಳನ್ನು ಬಳಸುವಂತಿಲ್ಲ. ಬದಲಿಗೆ ನೈಸರ್ಗಿಕ ಬಣ್ಣಗಳನ್ನು ಬಳಸಿ, ಅರಿಶಿನ, ಕುಂಕುಮ, ಮತ್ತು ಇತರ ನೈಸರ್ಗಿಕ ವಸ್ತುಗಳಿಂದ ಮಾಡಿದ ಬಣ್ಣಗಳನ್ನು ಬಳಸಬೇಕು.
ಅಲಂಕಾರ : ಮಣ್ಣು, ಅರಿಶಿನ, ಕುಂಕುಮ, ಅಕ್ಕಿ ಹಿಟ್ಟು, ಹೂವುಗಳು, ಎಲೆಗಳು, ಹಣ್ಣುಗಳು ಮುಂತಾದ ನೈಸರ್ಗಿಕ ವಸ್ತುಗಳನ್ನು ಬಳಸಿ ಮೂರ್ತಿಗಳನ್ನು ಅಲಂಕರಿಸಬೇಕು. ಸಮಯದ ಅವಧಿ: 1.30 ಗಂಟೆ.
ಬಹುಮಾನಗಳು : ಪ್ರತಿ ವಿಭಾಗದಲ್ಲೂ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ವಿತರಿಸಲಾಗುವುದು. ಭಾಗವಹಿಸುವ ಎಲ್ಲರಿಗೂ ಮೆಚ್ಚುಗೆಯ ಪ್ರಮಾಣಪತ್ರ ನೀಡಿ ಅಭಿನಂದಿಸಲಾಗುವುದು.