ಸುರತ್ಕಲ್ : ಎಂ.ಆರ್.ಪಿ.ಎಲ್. ಸಂಸ್ಥೆಯವರು ನಡೆಸುತ್ತಿರುವ ಸ್ವಚ್ಛತಾ ಪಕ್ವಾಡದ ಅಂಗವಾಗಿ ಸುರತ್ಕಲ್ ಗೋವಿಂದ ದಾಸ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ರೋವರ್ಸ್ ಆ್ಯಂಡ್ ರೇಂಜರ್ಸ್ ಹಾಗೂ ಜೂನಿಯರ್ ರೆಡ್ ಕ್ರಾಸ್ ಯೂನಿಟ್ ಸಹಯೋಗದಲ್ಲಿ ಕಾಲೇಜಿನ ಆವರಣದಿಂದ ಸುರತ್ಕಲ್ ಪೇಟೆಯವರೆಗೆ ಸ್ವಚ್ಛತಾ ಜಾಗೃತಿ ಜಾಥಾ ದಿನಾಂಕ : 12-07-2023ರಂದು ನಡೆಯಿತು. ಇದರ ಅಂಗವಾಗಿ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಂದ “ಸ್ವಚ್ಛತೆ ನಮ್ಮ ಧ್ಯೇಯ” ಎಂಬ ಶೀರ್ಷಿಕೆಯ ಬೀದಿ ನಾಟಕ ಸ್ವಚ್ಚತೆಯ ಕುರಿತು ಜನರಲ್ಲಿ ಅರಿವು ಮೂಡಿಸಿತು. ಈ ನಾಟಕವನ್ನು ವಿದ್ಯಾರ್ಥಿ ಶ್ರೀ ವಿನೀತ್ ರಾಜ್ ಮಧ್ಯ ರಚಿಸಿ, ಹಿನ್ನೆಲೆ ಸಂಗೀತ ನೀಡಿದರು ಹಾಗೂ ಉಪನ್ಯಾಸಕ, ರಂಗಕರ್ಮಿ ಶ್ರೀ ರಾಕೇಶ್ ಹೊಸಬೆಟ್ಟು ಬೀದಿ ನಾಟಕವನ್ನು ನಿರ್ದೇಶಿಸಿದರು. ಈ ಬೀದಿನಾಟಕದಲ್ಲಿ ಸುಮಾರು 45 ವಿದ್ಯಾರ್ಥಿಗಳು ಅಭಿನಯಿಸಿ ನೆರೆದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.
ಕಾರ್ಯಕ್ರಮದಲ್ಲಿ ರೋಶನಿ ನಿಲಯ ಸ್ಕೂಲ್ ಆಫ್ ಸೋಷಿಯಲ್ ವರ್ಕ್ ಇದರ ರಿಜಿಸ್ಟ್ರಾರ್ ಪ್ರೊ. ವಿನೀತಾ ರೈ ಅವರು ಮುಖ್ಯ ಅತಿಥಿಗಳಾಗಿ ಸ್ವಚ್ಛತಾ ಸಂದೇಶ ನೀಡಿದರು. ಎಂ.ಆರ್.ಪಿ.ಎಲ್. ಸಂಸ್ಥೆಯ ಸಿ.ಎಸ್.ಆರ್ ವಿಭಾಗದ ಶ್ರೀ ಮಾಲತೇಶ್ ಎಂ.ಎಚ್., ಶ್ರೀ ನಾಗರಾಜ್ ರಾವ್, ಶ್ರೀ ಸ್ಟೀವನ್ ಪಿಂಟೋ, ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಲಕ್ಷ್ಮೀ ಪಿ., ಉಪ ಪ್ರಾಚಾರ್ಯರಾದ ಶ್ರೀಮತಿ ಸುನೀತಾ ಕೆ, ವಿದ್ಯಾರ್ಥಿ ಕ್ಷೇಮಪಾಲಕಿ ಶ್ರೀಮತಿ ಪಲ್ಲವಿ, ರಾ.ಸೇ.ಯೋ. ಕಾರ್ಯಕ್ರಮಾಧಿಕಾರಿ ಶ್ರೀಮತಿ ಚೈತ್ರ ಶೆಟ್ಟಿ, ರೋವರ್ಸ್ ಮತ್ತು ರೇಂಜರ್ ನಾಯಕರಾದ ಶ್ರೀಮತಿ ಶೈಲಜಾ ಕೆ, ಶ್ರೀ ಮಂಜುನಾಥ ಶೇಷಾದ್ರಿ, ಜೂನಿಯರ್ ರೆಡ್ ಕ್ರಾಸ್ ಸಂಯೋಜಕರಾದ ಶ್ರೀಮತಿ ಜಯಂತಿ ಅಮೀನ್, ಶ್ರೀ ನಿಖಿಲ್ ಭೂಷಣ್, ಉಪನ್ಯಾಸಕರಾದ ಡಾ. ಚೇತನಾ ಬಿ.ಕೆ, ಶ್ರೀ ವೆಂಕರಮಣ, ಸುಮಾರು 200ಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು ಇತರರು ಉಪಸ್ಥಿತರಿದ್ದರು.