ಕುಂದಾಪುರ :ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ-ಐರೋಡಿ ಆಯೋಜಿಸಿದ ಇಪ್ಪತ್ತು ದಿನಗಳ ಯಕ್ಷಗಾನ ತರಬೇತಿ ಶಿಬಿರ ‘ನಲಿ–ಕುಣಿ 2025’ ಇದರ ಸಮಾರೋಪ ಸಮಾರಂಭ ಹಾಗೂ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವು ದಿನಾಂಕ 03 ಮೇ 2025ರ ಶನಿವಾರ ಸಂಜೆ ಗಂಟೆ 4.30ರಿಂದ ಗುಂಡ್ಮಿ-ಸಾಲಿಗ್ರಾಮದ ಸದಾನಂದ ರಂಗ ಮಂಟಪದಲ್ಲಿ ನಡೆಯಲಿದೆ.
ಶ್ರೀ ಶ್ರೀ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮಿಗಳು ಬಾಳ್ಳುದ್ರು ಮಠ ಇವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ-ಐರೋಡಿ ಇದರ ಅಧ್ಯಕ್ಷರಾದ ಶ್ರೀ ಆನಂದ ಸಿ. ಕುಂದರ್ ವಹಿಸಲಿರುವರು. ಸಮಾರಂಭದಲ್ಲಿ ಅತಿಥಿಗಳಾಗಿ ಕುಂದಾಪುರ ಕ್ಷೇತ್ರದ ಶಾಸಕರಾದ ಶ್ರೀ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ ಗಂಟಹೊಳೆ, ಓ. ಎನ್. ಜಿ. ಸಿ ಗೋವಾ ಇದರ ನಿವೃತ್ತ ಮಹಾ ಪ್ರಬಂಧಕರಾದ ಶ್ರೀ ಬನ್ನಾಡಿ ನಾರಾಯಣ ಆಚಾರ್, ಲೆಕ್ಕಪತ್ರ ಪರಿಶೋಧಕರಾದ ಶ್ರೀ ಜತೀಂದ್ರ ಮರವಂತೆ ಹಾಗೂ “ನಲಿ–ಕುಣಿ” ಶಿಬಿರದ ನಿರ್ದೇಶಕರಾದ ಪ್ರಾಚಾರ್ಯ ಶ್ರೀ ಕೆ. ಸದಾನಂದ ಐತಾಳ ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದ ಮೊದಲು ಹಾಗೂ ನಂತರದಲ್ಲಿ ಶಿಬಿರಾರ್ಥಿಗಳ ಕಲಿಕಾ ಪ್ರದರ್ಶನ ನಡೆಯಲಿದೆ.
Subscribe to Updates
Get the latest creative news from FooBar about art, design and business.