ಬಂಟ್ವಾಳ : ದೀಪಿಕಾ ಪ್ರೌಢ ಶಾಲೆ ಮೊಡಂಕಾಪುವಿನಲ್ಲಿ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಬಂಟ್ವಾಳ, ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನ ಮತ್ತು ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ಇಲಾಖೆ ಬೆಂಗಳೂರು ಇದರ ವತಿಯಿಂದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರಿಗೆ ಸಹಪಠ್ಯ ಚಟುವಟಿಕೆಗಳ ಸ್ಪರ್ಧಾ ಕಾರ್ಯಕ್ರಮವು ದಿನಾಂಕ 05 ನವೆಂಬರ್ 2024ರಂದು ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಮ್.ಜಿ. ಇವರು ಮಾತನಾಡಿ “ಶಿಕ್ಷಕರು ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಕ್ರಿಯಾಶೀಲರಾಗಿರಬೇಕು. ಉತ್ತಮ ಹವ್ಯಾಸ ಬೆಳೆಸಿಕೊಂಡು ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಬೇಕು” ಎಂದು ಹೇಳಿದರು
ಮೊಡಂಕಾಪು ಚರ್ಚ್ ಫಾ. ಮೆಲ್ವಿನ್ ಲೋಬೋ ಶುಭ ಹಾರೈಸಿದರು. ಸಂಪನ್ಮೂಲ ಕೇಂದ್ರಗಳ ಸಮನ್ವಯಾಧಿಕಾರಿ ವಿದ್ಯಾ ಮಾನ್ಯ, ಸಹಶಿಕ್ಷಕರ ಸಂಘದ ಅಧ್ಯಕ್ಷ ಜಯರಾಮ, ಮುಖ್ಯ ಗುರುಗಳ ಸಂಘದ ಅಧ್ಯಕ್ಷೆ ಪ್ರೇಮಾ, ಜಿ.ಪಿ.ಟಿ. ಸಂಘದ ಕಾರ್ಯದರ್ಶಿ ರಾಜೇಶ್, ಸರಕಾರಿ ಪ್ರೌಢ ಶಾಲೆ ಪೊಳಲಿಯ ಸುಮನ ವೇದಿಕೆಯಲ್ಲಿದ್ದರು. ನಿವೃತ್ತ ಶಿಕ್ಷಕರಾದ ಮಹಾಬಲೇಶ್ವರ ಹೆಬ್ಬಾರ್, ಜಯಾನಂದ ಪೆರಾಜೆ, ಬಿ. ರಾಮಚಂದ್ರ ರಾವ್ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿ ಸುಜಾತ ಸ್ವಾಗತಿಸಿ ನಿರೂಪಿಸಿದರು.
ವಿವಿಧ ಸ್ಪರ್ಧೆಗಳ ಫಲಿತಾಂಶ : ಪ್ರಥಮ, ದ್ವಿತೀಯ, ತೃತೀಯ ಸ್ಥಾನ ವಿಜೇತರು
ಪ್ರೌಢಶಾಲಾ ವಿಭಾಗ
1. ಆಶುಭಾಷಣ- ಗೋಪಾಲಕೃಷ್ಣ ನೇರಳಕಟ್ಟೆ, ರಂಜಿತಾ ರಾಜೀವ ಟಿ. ಪೊಳಲಿ, ಚೇತನಾ ಪಿ. ಮೊಡಂಕಾಪು
2. ಭಾವಗೀತೆ- ವಿಜಯಲಕ್ಷ್ಮೀ ಮಂಚಿ, ಜಯರಾಮ ಮಾಣಿ, ಸುಧೀರ್ ಕೊಡಂಗೆ
3. ಪ್ರಬಂಧ – ಸವಿತಾ ಕನ್ಯಾನ, ಅನಿತಾ ಮೊಡಂಕಾಪು, ಸವಿತಾ ಮೊಡಂಕಾಪು
4. ಪಾಠೋಪಕರಣ – ಶಂಕರ್ ವೆಂಕಪ್ಪ ಗೋಳ್ತಮಜಲು, ರಮ್ಯಾ ಕೊಯಿಲ, ಉಮಾದೇವಿ ಮೊಡಂಕಾಪು.
5. ಚಿತ್ರ – ಚೆನ್ನಕೇಶವ ಡಿ.ಆರ್. ಪೆರ್ನೆ, ಸತ್ಯಶಂಕರ್ ಕಡೇಶಿವಾಲಯ, ಅಮೀನಶೇಕ್ ಸಿದ್ದಕಟ್ಟೆ
6. ರಸಪ್ರಶ್ನೆ (ಸಾಮಾನ್ಯ ಜ್ಞಾನ) – ಪ್ರವೀಣ್ ಕುಮಾರ್ ಎಮ್. ಬೊಳಂತಿಮೊಗರು, ಇಂಮ್ತಿಯಾಝ್ ಪಂಜಿಕಲ್ಲು, ಮಾರ್ಕ್ಪಿಂಟೋ ಪಂಜಿಕಲ್ಲು
7. ರಸಪ್ರಶ್ನೆ (ವಿಜ್ಞಾನ)- ರಾಧಾಕೃಷ್ಣ ಮೂಲ್ಯ ವಾಮದಪದವು, ಲಿನೆಟ್ ಸುನಿತಾ ಲೋಬೋ ಮೊಡಂಕಾಪು, ವಿದ್ಯಾ ಮಾನ್ಯ ಬಂಟ್ವಾಳ
ಪ್ರಾಥಮಿಕ ವಿಭಾಗ
1. ಆಶು ಭಾಷಣ – ರಮೇಶ್ ಬಿ.ಎಸ್. ಮಾಣಿ, ಪ್ರಾನ್ಸಿಸ್ ಡೇಸಾ ಕಂಚಿನಡ್ಕ ಪದವು, ರವಿ ಕೆ. ತೆಂಕಕಜೆಕಾರು
2. ಭಾವಗೀತೆ- ಗೀತಾ ಕಾಡಬೆಟ್ಟು, ರಮಾ ಕನ್ಯಾನ, ರಾಜೇಶ್ ಕೆ. ಬಡಗಕಜೆಕಾರು
3. ಪ್ರಬಂಧ – ಹರಿಣಾಕ್ಷಿ ದೇವಸ್ಯಮೂಡೂರು, ರಶ್ಮಿ ಸುರಿಬೈಲು, ನಂದಿನಿ ಎಸ್. ಕೆದಿಲ ಗಡಿಯಾರ
4. ಪಾಠೋಪಕರಣಗಳ ತಯಾರಿ – ನಮಿತ ನಾಟಿ, ರಾಘವೇಂದ್ರ ಬಿ. ಕುಜಿಲಬೆಟ್ಟು, ಚಂದ್ರಾವತಿ ಲಕ್ಷ್ಮಿಕೋಡಿ
5. ಚಿತ್ರ ಬರೆಯುವುದು -ಉಷಾ ಪಿಲಿಮೊಗರು, ಸುಮನ ಸುಜೀರು, ಸೀತಾರಾಮ ಮೇಲ್ಪತ್ರೆ
6. ರಸಪ್ರಶ್ನೆ( ಸಾಮಾನ್ಯ ಜ್ಞಾನ) – ಅಕ್ಬರ್ ಅಲಿ ಉಳಿಬೈಲು, ರಘುವೀರ ಸಜಿಪಮುನ್ನೂರು, ಹುಸೇನಮಿಯಾ ಅಜ್ಜಿನಡ್ಕ
7. ರಸಪ್ರಶ್ನೆ (ವಿಜ್ಞಾನ)- ಪುಷ್ಪಾವತಿ ವೈ. ಕಲ್ಲಜೇರ, ನಾಗವೇಣಿ ಅಮ್ಮೆಮ್ಮಾರ್, ಕಿಶೋರಿ ಮಧ್ವ