ಮಂಜೇಶ್ವರ : ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು ಮತ್ತು ಕನ್ನಡ ವಿಭಾಗ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜು ಮಂಜೇಶ್ವರ ಇವರ ಸಹಭಾಗಿತ್ವದಲ್ಲಿ ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಸಂಸ್ಮರಣೆ ಮತ್ತು ಕೃತಿ ಬಿಡುಗಡೆ ಕಾರ್ಯಕ್ರಮವನ್ನು ದಿನಾಂಕ 09 ಆಗಸ್ಟ್ 2025ರಂದು ಪೂರ್ವಾಹ್ನ 10-00 ಗಂಟೆಗೆ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಕ.ಸಾ.ಪ. ಕೇರಳ ಗಡಿನಾಡ ಘಟಕದ ಅಧ್ಯಕ್ಷರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಇವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಶಿವಶಂಕರ ಪಿ. ಇವರು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಮೊಹಮದ್ ಅಲಿ ಕೆ. ಇವರು ಉದ್ಘಾಟನೆ ಮಾಡಲಿದ್ದು, ಅಧೀಕ್ಷಕರಾದ ದಿನೇಶ ಕೆ. ಇವರು ಶುಭಾಶಂಸನೆಗೈಯ್ಯಲಿದ್ದಾರೆ. ಕುಮಾರಿ ದೀಕ್ಷಿತ ಇವರ ‘ಧ್ವನಿ’ ಕೃತಿ ಬಿಡುಗಡೆಗೊಳ್ಳಲಿದ್ದು, ಕೃತಿಯ ಪರಿಚಯವನ್ನು ನಿವೃತ್ತ ಮುಖ್ಯೋಪಾಧ್ಯಯರಾದ ರಾಜಾರಾಮ ರಾವ್ ಟಿ. ಇವರು ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ನಡೆಯಲಿರುವ ವಿಚಾರಗೋಷ್ಠಿಯಲ್ಲಿ ‘ಕಯ್ಯಾರ ಕಿಞ್ಞಣ್ಣ ರೈಅವರ ಬದುಕು – ಬರಹ ಪಕ್ಷಿನೋಟ’ ಎಂಬ ವಿಷಯದ ಬಗ್ಗೆ ವಿದ್ಯಾರ್ಥಿಗಳಾದ ಸರ್ವಾಣಿ ಬಿ.ಕೆ., ಕಿಶನ್ ರಾಜ್, ಸೈಪ್ಹನ್ ಸಾಬ್, ಅನುಪ್ರಭ, ಶಿವಾನಿ, ಕುಮಾರಿ ತನ್ವಿ ಇವರುಗಳು ಪ್ರಬಂಧ ಮಂಡನೆ ಮಾಡಲಿದ್ದಾರೆ. ವಿದ್ಯಾರ್ಥಿಗಳಾದ ವಿದ್ಯಾಲಕ್ಷ್ಮಿ, ನಂದಿನಿ, ಲಾವಣ್ಯ, ಪೂಜಾ, ಶಿವಾನಿ, ತನುಶ್ರೀ, ತೇಜಾಕ್ಷಿ ಮತ್ತು ಕುಮಾರಿ ಅನೂಶ ಇವರಿಂದ ಕಾವ್ಯ ಗಾಯನ ಪ್ರಸ್ತುತಗೊಳ್ಳಲಿದೆ.