ಮಂಗಳೂರು : ದ.ಕ ಮತ್ತು ಉಡುಪಿ ಜಿಲ್ಲಾ ವಿಭಾಗೀಯ ಕಾರ್ಯನಿರ್ದೇಶಕರ ಸಂಯಕ್ತ ಘಟಕ ಶಾ.ಕು.ವಿ.ಮಂಡಳಿ, ದ.ಕ ತಾಲೂಕು ಮಾತೃ ಸಮನ್ವಯ ಸಮಿತಿ ಶಾ. ಕು. ವಿ. ಮಂಡಳಿ ಪುತ್ತೂರು ಇದರ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಪ್ರಾಥಮಿಕ ಯೋಜನೆಯ ವಿದ್ಯಾರ್ಥಿ ಸಬಲೀಕರಣ ಮತ್ತು ರಕ್ಷಾ ನಿಧಿ ಕಾರ್ಯಯಾನ ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಇದರ ಉದ್ಘಾಟನಾ ಸಮಾರಂಭವು ದಿನಾಂಕ 27 ಅಕ್ಟೋಬರ್ 2024ರ ಆದಿತ್ಯವಾರ ಪುತ್ತೂರಿನ ರೋಟರಿ ಕ್ಲಬ್ ಇದರ ‘ಮನಿಷಾ’ ಸಭಾಂಗಣದಲ್ಲಿ ನಡೆಯಲಿದೆ. ಆ ಪ್ರಯುಕ್ತ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆನ್ ಲೈನ್ ಮತ್ತು ನೇರ ವೇದಿಕೆಯ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಂಡಿದ್ದು ಅದರ ವಿವರಗಳು ಈ ರೀತಿ ಇವೆ.
3 ವರ್ಷದ ಒಳಗಿನ ಮಕ್ಕಳಿಗೆ ( ಛದ್ಮ ವೇಷ), 3 ರಿಂದ 6 ವರ್ಷದ ಒಳಗಿನ ಮಕ್ಕಳಿಗೆ (ಛದ್ಮ ವೇಷ), 1 ರಿಂದ 3 ನೇ ತರಗತಿ ವಿದ್ಯಾರ್ಥಿಗಳಿಗೆ (ಛದ್ಮ ವೇಷ ಹಾಗೂ ಅಭಿನಯ ಗೀತೆ), 4 ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ( ಅಭಿನಯ ಗೀತೆ, ಭಾವಗೀತೆ, ಏಕ ಪಾತ್ರಾಭಿನಯ, ಚಿತ್ರಕಲೆ, ಜನಪದ ನೃತ್ಯ ವೈಯಕ್ತಿಕ) ಹಾಗೂ 8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ (ಭಾವಗೀತೆ, ಏಕಪಾತ್ರಾಭಿನಯ, ಚಿತ್ರಕಲೆ, ಜನಪದ ನೃತ್ಯ ವೈಯಕ್ತಿಕ)
ಮೇಲಿನ ಎಲ್ಲಾ ಸ್ಪರ್ಧೆಗಳು ತಾಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದ ಹಂತಗಳಲ್ಲಿ ನಡೆಸಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವ ವಿಧ್ಯಾರ್ಥಿಗಳು ದಿನಾಂಕ 27 ಅಕ್ಟೋಬರ್ 2024ರ ಆದಿತ್ಯವಾರ ಸಮಯ 9:30ಕ್ಕೆ ಸರಿಯಾಗಿ ರೋಟರಿ ಕ್ಲಬ್ ಇದರ ‘ಮನಿಷಾ’ ಸಭಾಂಗಣಕ್ಕೆ ಪೋಷಕರೊಂದಿಗೆ ಹಾಜರಿರತಕ್ಕದ್ದು, ವಿದ್ಯಾರ್ಥಿಯ ಒಂದು ಆಧಾರ್ ಜೆರಾಕ್ಸ್ ಪ್ರತಿ, ಶಾಲಾ ತರಗತಿಯ ಗುರುತಿನ ಪ್ರತಿ, ನೋಂದಣಿ ಶುಲ್ಕ ರೂಪಾಯಿ 265 ಪಾವತಿಸಿ ಮಂಡಳಿ ಕಾರ್ಯಕ್ರಮದ ಧೃಡೀಕರಣ ಸಂಖ್ಯೆಯನ್ನು ಪಡೆದುಕೊಳ್ಳಬಹುದು.
ಒಬ್ಬ ವಿದ್ಯಾರ್ಥಿ ಮೇಲಿನ ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು, ಸ್ಪರ್ಧೆಯ ರೀತಿ ನಿಬಂಧನೆಗಳನ್ನು ಮಂಡಳಿ ಕಾರ್ಯಕ್ರಮದ ನೋಂದಣಿ ದಿನಾಂಕದಂದು ಪ್ರಕಟಿಸಲಾಗುವುದು.
ರಾಜ್ಯಮಟ್ಟದಲ್ಲಿ ವಿಜೇತರಾದವರಿಗೆ ಕಿರು ನಗದು ಹಾಗೂ ಶಾರದ ಮಾತೆಯ ಶಾಶ್ವತ ಫಲಕ, ಪ್ರಮಾಣ ಪತ್ರ ನೀಡಿಲಾಗುವುದು. ಜಿಲ್ಲಾ ವಿಭಾಗದಲ್ಲಿ ವಿಜೇತರಾದವರು ಶಾಶ್ವತ ಫಲಕ ಪ್ರಮಾಣ ಪತ್ರ ಸ್ವೀಕರಿಸಲು ಅರ್ಹರಾಗಿರುತ್ತಾರೆ.
ನೋಂದಣಿ ದಿನಾಂಕದಂದು ಬರಲು ಅನಾನುಕೂಲವಾದ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಹೆಸರು ನೋಂದಾಹಿಸಿಬಹುದು ವಿ. ಸೂ ವಿಕಲಚೇತನಾ ವಿದ್ಯಾರ್ಥಿಗಳು ತಮ್ಮ ಯಾವುದೇ ವೈಯಕ್ತಿಕ ಪ್ರತಿಭೆಯ ಸ್ವ ವಿವರವನ್ನು ಪ್ರತ್ಯೇಕವಾಗಿ ತಿಳಿಸಬಹುದು.
ಹೆಚ್ಚಿನ ಮಾಹಿತಿಗೆ ಶಾರದ ಕುಟುಂಬ ವಿಕಸನ ಮಂಡಳಿಯ 990184725ರ ಈ ಸಂಖ್ಯೆಯನ್ನು ಸಂಪರ್ಕಿಸಬಹುದು.
Subscribe to Updates
Get the latest creative news from FooBar about art, design and business.
ಶಾರದಾ ಕುಟುಂಬ ವಿಕಸನ ಮಂಡಳಿಯಿಂದ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು | ಅಕ್ಟೋಬರ್ 27
Previous Articleಸುಳ್ಯದ ಸೋನ ಕಲಾ ಗ್ಯಾಲರಿಯಲ್ಲಿ ‘ಸೋನ ನೆನಪು’ | ಅಕ್ಟೋಬರ್ 19
Next Article ಲೇಖನ – ವಜ್ರಮಹೋತ್ಸವವೆಂಬ ಮಹೋನ್ನತ ಕಾರ್ಯ