ಮಡಿಕೇರಿ : ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ದಿನಾಂಕ 20-10-2023ರಂದು ನಗರದ ಗಾಂಧಿ ಮೈದಾನದಲ್ಲಿ 10ನೇ ವರ್ಷದ ದಸರಾ ಅಂಗವಾಗಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಕೊಡಗು ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಮಕ್ಕಳ ದಸರಾ ಸ್ಪರ್ಧೆಗಳು ದಿನಾಂಕ 20-10-2023ರಂದು ಬೆಳಗ್ಗೆ 9.30 ಗಂಟೆಯಿಂದ ಪ್ರಾರಂಭವಾಗಲಿದೆ. ಮಕ್ಕಳಿಂದ ಸಂತೆ ಮತ್ತು ಮಕ್ಕಳಿಂದ ಅಂಗಡಿ – ಎಸ್‌ಎಸ್‌ಎಲ್‌ಸಿ ಒಳಗಿನ ವಿದ್ಯಾರ್ಥಿಗಳಿಗಾಗಿ ಆಯೋಜಿತವಾದ ಮಕ್ಕಳ ಸಂತೆಯಲ್ಲಿ ಒಂದು ತಂಡದಲ್ಲಿ ಗರಿಷ್ಠ 5 ವಿದ್ಯಾರ್ಥಿಗಳಿಗೆ ಅವಕಾಶವಿದೆ. ಮಕ್ಕಳ ಅಂಗಡಿಯಲ್ಲಿ ಗರಿಷ್ಠ ಇಬ್ಬರು ಸ್ಪರ್ಧಿಗಳಿಗೆ ಅವಕಾಶವಿದೆ. ಮಕ್ಕಳಿಂದ ಮಂಟಪ- 10 ನಿಮಿಷದ ಪ್ರದರ್ಶನಾವಧಿಯುಳ್ಳ ಮಂಟಪ ತಯಾರಿಕಾ ಸ್ಪರ್ಧೆಯಲ್ಲಿ ಒಂದು ತಂಡದಲ್ಲಿ 6 ಮಕ್ಕಳು ಪಾಲ್ಗೊಳ್ಳಬಹುದು.
ಎಲ್.ಕೆ.ಜಿ.ಯಿಂದ 1 ನೇ ತರಗತಿ, 2 – 4ನೇ ತರಗತಿ, 5 – 7 ನೇ ತರಗತಿಗಳ ಮಕ್ಕಳಿಗೆ ಪ್ರತ್ಯೇಕ ವಿಭಾಗಗಳಲ್ಲಿ ಛದ್ಮವೇಷ ಸ್ಪರ್ಧೆಗಳು ನಡೆಯಲಿದ್ದು, ಗರಿಷ್ಠ 2 ನಿಮಿಷದ ಪ್ರದರ್ಶನಕ್ಕೆ ಮಾತ್ರ ಅವಕಾಶ ಇದೆ. ವಸ್ತಾಲಂಕಾರಕ್ಕೆ ಆದ್ಯತೆಯಿದೆ. 4 – 6 ನೇ ತರಗತಿ ಮತ್ತು 8 – 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಕ್ಲೇ ಮಾಡೆಲಿಂಗ್ ಸ್ಪರ್ಧೆ ಆಯೋಜಿತವಾಗಿದೆ.
ದಿನಾಂಕ 20-10-2023ರಂದು ನಗರದ ಗಾಂಧಿ ಮೈದಾನದ ಕಲಾ ಸಂಭ್ರಮ ಸಭಾಂಗಣದಲ್ಲಿ ಸ್ಪರ್ಧಿಗಳು ಬೆಳಗ್ಗೆ 9 ಗಂಟೆಗೆ ಸರಿಯಾಗಿ ಹಾಜರಿರಬೇಕು. ಎಲ್ಲಾ ಸ್ಪರ್ಧೆಗಳು ಬೆಳಗ್ಗೆ 9.30 ಗಂಟೆಯಿಂದ ಪ್ರಾರಂಭವಾಗುತ್ತದೆ. ಸ್ಪರ್ಧೆಗಳಿಗೆ ಹೆಸರು ನೋಂದಾಯಿಸಲು ಸಂಪರ್ಕ ಸಂಖ್ಯೆಗಳು ಇಂತಿವೆ. ಮಕ್ಕಳಿಂದ ಸಂತೆ – ಶಫಾಲಿ ರೈ 9741523484, ಮಕ್ಕಳಿಂದ ಅಂಗಡಿ ಸ್ಪರ್ಧೆ – ಪ್ರಿಯಾ ಪ್ರಶಾಂತ್ 9449915522, ಮಕ್ಕಳಿಂದ ಮಂಟಪ- ಗಾನಾ ಪ್ರಶಾಂತ್ 9449713748, ಛದ್ಮವೇಶ ಸ್ಪರ್ಧೆ – ಶಮ್ಮಿ ಪ್ರಭು 9449833179 ಮತ್ತು ನಮಿತಾ 9448976405, ಕ್ಲೇ ಮಾಡೆಲಿಂಗ್ – ಸುಮನಾ ಶ್ರೀಹರಿ 7353078661 ಮತ್ತು ರೀನಾ 9448793619. ಎಲ್ಲಾ ಸ್ಪರ್ಧೆಗಳಿಗೆ ಹೆಸರು ನೋಂದಾಯಿಸಲು ಕೊನೆಯ ದಿನಾಂಕ ಅಕ್ಟೋಬರ್ 10 ಆಗಿರುತ್ತದೆ.