ಕಾಸರಗೋಡು : ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಕಾಸರಗೋಡು ಕನ್ನಡ ಗ್ರಾಮದಲ್ಲಿ ದಿನಾಂಕ 27 ಮಾರ್ಚ್ 2025ರಂದು ನಡೆಯುವ ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನ -2025 ಮತ್ತು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಕನ್ನಡ ಗ್ರಾಮ, ಕಾಸರಗೋಡು ಹಾಗೂ ವಿ.ಕೆ.ಎಂ. ಕಲಾವಿದರು (ರಿ.) ಬೆಂಗಳೂರು ನೇತೃತ್ವದಲ್ಲಿ ಕರ್ನಾಟಕ ಗಡಿನಾಡ ಉತ್ಸವ ಹಾಗೂ ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ಬೆಂಗಳೂರು ಕನ್ನಡ ನಾಟಕೋತ್ಸವವನ್ನು ಆಯೋಜಿಸಲಾಗಿದೆ.
ಕಾಸರಗೋಡು ಜಿಲ್ಲಾ 7ನೇ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ ಕವಿ, ಸಾಹಿತಿಗಳು, ಮುಖ್ಯ ಅತಿಥಿಗಳು, ಕನ್ನಡ ವಿದ್ಯಾರ್ಥಿಗಳಿಗೆ ನೀಡಲು ಪುಸ್ತಕ ಹಬ್ಬ, ಪುಸ್ತಕ ದಾನ – ಶ್ರೇಷ್ಠದಾನ ಸಾಹಿತ್ಯ ಪುಸ್ತಕಗಳ ಕೊಡುಗೆಗಳಿಗೆ ಆಹ್ವಾನ ಎಂದು ಮಾಧ್ಯಮಗಳಲ್ಲಿ ಪ್ರಕಟಗೊಂಡ ಮಾಹಿತಿಯನ್ವಯ ಬೆಳ್ತಂಗಡಿಯ ಮೂಲದ ಮಹಾರಾಷ್ಟ್ರದ ಕಲ್ಯಾಣದ ಲೇಖಕಿ, ಕವಯತ್ರಿ, ಕುಮುದಾ ಡಿ. ಶೆಟ್ಟಿಯವರು 38 ಕೃತಿಗಳ ಕೊಡುಗೆಯನ್ನು ನೀಡಿದ್ದಾರೆ. ಅವರಿಗೆ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವರಾಮ ಕಾಸರಗೋಡು ಕೃತಜ್ಞತೆ ಸಲ್ಲಿಸಿದ್ದಾರೆ. ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಇದರ 25ನೇ ಬೆಳ್ಳಿ ಹಬ್ಬ ವರ್ಷದ ನೆನಪಿಗಾಗಿ 60 ಕನ್ನಡ ಶಾಲಾ ಕಾಲೇಜುಗಳ ಗ್ರಂಥ ಭಂಡಾರಕ್ಕೆ ನಾಡಿನ ಕವಿ, ಸಾಹಿತಿ, ಲೇಖಕರು, ಬರಹಗಾರರು, ಮಾಧ್ಯಮದವರು, ಪ್ರಕಾಶಕರು ಹಾಗೂ ಸಂಘ ಸಂಸ್ಥೆಗಳು, ಮಠ, ಆಶ್ರಮ, ದೇವಸ್ಥಾನಗಳು, ಉದಾರವಾಗಿ ನೀಡಿದ ಸಾಹಿತ್ಯ ಕೃತಿಗಳನ್ನು ಪುಸ್ತಕ ಹಬ್ಬ, ಪುಸ್ತಕದಾನ, ಶ್ರೇಷ್ಠ ದಾನ ಯೋಜನೆಯನ್ವಯ ಗ್ರಂಥಗಳನ್ನು ಹಸ್ತಾಂತರಿಸಲಾಗುವುದು.
ಈ ಕಾಸರಗೋಡು ಕನ್ನಡ ಗ್ರಾಮದ ಪುಸ್ತಕ ಹಬ್ಬ ಪುಸ್ತಕದಾನ ಶ್ರೇಷ್ಠದಾನ ಯೋಜನೆಗೆ ಸಾಹಿತ್ಯ ಕೃತಿಗಳು, ಪುಸ್ತಕಗಳನ್ನು ನೀಡುವುದರೊಂದಿಗೆ, ತಾವು ಉದಾರವಾಗಿ ಧನ ಸಹಾಯ ನೀಡಿ ಪ್ರೋತ್ಸಾಹಿಸಿ ನಮ್ಮೊಂದಿಗೆ ಕೈಜೋಡಿಸಲು ಅವಕಾಶ ನೀಡಲಾಗುವುದು. ಈ ಪುಸ್ತಕದಾನ ಯೋಜನೆಗೆ ಧನ ಸಹಾಯ ನೀಡಿ ಪ್ರೋತ್ಸಾಹಿಸುವವರು ಶಿವರಾಮ ಕಾಸರಗೋಡು ಗೂಗಲ್ ಪೇ ನಂಬ್ರ : 9448572016 ಇಲ್ಲಿಗೆ ಪಾವತಿಸಬಹುದು. ಮಂಗಳೂರು ಸಂಪರ್ಕ ವಿಳಾಸ : ಶಿವರಾಮ ಕಾಸರಗೋಡು, ಶ್ರೀ ಮಹಾಮಾಯಾ, ವೈಧ್ಯನಾಥ ನಗರ, 1ನೇ ಮುಖ್ಯ ಅಡ್ಡ ರಸ್ತೆ, ಮಾಡೂರು ಅಂಚೆ, ಕೋಟೆಕಾರು, ಉಳ್ಳಾಲ ತಾಲೂಕು -575022 ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ. ಮೊಬೈಲ್ : 9448572016, 9901951965.