ಕಾರ್ಕಳ : ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಆಯೋಜಿಸುವ ‘ಕ್ರಿಯೇಟಿವ್ ಸವಿಗಾನ’
ದೇಶಭಕ್ತಿ ಗೀತೆ ಮತ್ತು ಸದಭಿರುಚಿಯ ಗೀತಗಾಯನ ಕಾರ್ಯಕ್ರಮವು 15 ಆಗಸ್ಟ್ 2024ರಂದು ಕ್ರಿಯೇಟಿವ್ ಪ. ಪೂ. ಕಾಲೇಜಿನ ‘ಸಪ್ತಸ್ವರ ವೇದಿಕೆ’ಯಲ್ಲಿ ನಡೆಯಲಿದೆ.
ಪೂರ್ವಾಹ್ನ ಘಂಟೆ 11.00ಕ್ಕೆ ಪ್ರಾರಂಭವಾಗುವ ಈ ಕಾರ್ಯಕ್ರಮವನ್ನು ಮಜಾಟಾಕೀಸ್ ಖ್ಯಾತಿಯ ಮೋಹನ್ ಕಾರ್ಕಳ ಮತ್ತು ತಂಡ ನಡೆಸಿಕೊಡಲಿದ್ದಾರೆ. ತಂಡದಲ್ಲಿ ಗಾಯಕರಾಗಿ ಪಲ್ಲವಿ ಪ್ರಭು, ಸಂದೇಶ್ ಬಾಬಣ್ಣ, ಮಹೇಶ್ ಆಚಾರ್ಯ ಭಾಗವಹಿಸಲಿದ್ದು ಇವರಿಗೆ ಕೊಳಲಿನಲ್ಲಿ ಲೋಕೇಶ್, ಕೀಬೋರ್ಡ್ ನಲ್ಲಿ ಮೋಹನ್ ಕಾರ್ಕಳ, ರಿದಮ್ ಪ್ಯಾಡ್ ನಲ್ಲಿ ಪ್ರತಾಪ್ ಹಾಗೂ ತಬಲಾದಲ್ಲಿ ಪ್ರಜ್ವಲ್ ಆಚಾರ್ಯ ಸಹಕರಿಸಲಿದ್ದಾರೆ.

