ಮೂಲ್ಕಿ : ವಿಜಯ ಕಾಲೇಜು ಮೂಲ್ಕಿ, ವಿಜಯ ಮ್ಯಾಗಝೀನ್ ಮತ್ತು ಆಂತರಿಕ ಗುಣಮಟ್ಟ ಖಾತ್ರಿ ಕೋಶದ ಸಹಯೋಗದೊಂದಿಗೆ ದಿನಾಂಕ 13-10-2023ರಂದು ವಿಜಯ ಕಾಲೇಜಿನ ಕಿರು ಸಭಾಂಗಣದಲ್ಲಿ ಸೃಜನಶೀಲ ಬರಹ ಕಾರ್ಯಾಗಾರವು ನಡೆಯಿತು. ಈ ಕಾರ್ಯಾಗಾರವನ್ನು ತುಳುವೆರೆ ಆಯನೊ ಕೂಟದ ಅಧ್ಯಕ್ಷೆ ಶಮೀನಾ ಜಿ. ಆಳ್ವ ಇವರು ಉದ್ಘಾಟಿಸಿ ಮಾತನಾಡುತ್ತಾ “ಬರವಣಿಗೆ ಒಂದು ಸೃಜನಶೀಲ ಪ್ರಕ್ರಿಯೆ. ಪ್ರತಿ ವ್ಯಕ್ತಿ ತನ್ನದೇ ಚಿಂತನೆ, ಸಂವೇದನೆ ಮತ್ತು ಮಾತುಗಳನ್ನು ಭಾಷೆಯ ಕಲಾತ್ಮಕ ರೀತಿಯಲ್ಲಿ ಅಭಿವ್ಯಕ್ತಿಸುವ ರೀತಿ ವಿಶೇಷವಾದದ್ದು. ಇದು ಭಾಷೆಯ ಶಕ್ತಿ, ವ್ಯಕ್ತಿಯ ವಿಶಿಷ್ಟ ಶಕ್ತಿ” ಎಂದು ಹೇಳಿದರು.
ಯುವ ಬರಹಗಾರ ರಾಜೇಶ್ ಕುಮಾರ್ ಕಲ್ಯಾ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಶ್ರೀಮಣಿಯವರು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ನುಡಿದರು.
ವಿಜಯ ವಾರ್ಷಿಕ ಸಂಚಿಕೆಯ ಸಂಪಾದಕಿ ಡಾ. ಶೈಲಜಾ ವೈ.ವಿ. ಕಾರ್ಯಕ್ರಮ ಸಂಯೋಜಿಸಿದರು. ವಿದ್ಯಾರ್ಥಿ ಪ್ರತಿನಿಧಿ ಚೇತನಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ತಮ್ಮ ಸ್ವಅನುಭವ ಹಂಚಿಕೊಂಡರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸುಹಾಸ್ ಹೆಗ್ಡೆ ವಹಿಸಿದ್ದರು.