ಮಂಗಳೂರು: ಶಾರದಾ ಮಹೋತ್ಸವದ ಪ್ರಯುಕ್ತ ನಗರದ ಕೊಡಿಯಾಲ್ ಬೈಲಿನ ಶಾರದಾ ವಿದ್ಯಾಲಯದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಅಗಸ್ಟ್ 5ರಂದು ‘ಸಾಂಸ್ಕೃತಿಕ ಸ್ಪರ್ಧೆ’ಗಳನ್ನು ಏರ್ಪಡಿಸಲಾಗಿದೆ. ‘ಪುಟಾಣಿ’, ‘ಶಿಶು’, ‘ಬಾಲ’ ಮತ್ತು ‘ಕಿಶೋರ’ ವಿಭಾಗಗಳಲ್ಲಿ ಸ್ಪರ್ಧೆಯು ನಡೆಯುತ್ತದೆ.
‘ಪುಟಾಣಿ’ ವಿಭಾಗ ಯು.ಕೆ.ಜಿ. ಮಕ್ಕಳಿಗೆ, ‘ಶಿಶು’ ವಿಭಾಗ 1ರಿಂದ 4ನೇ ತರಗತಿಯ ವಿದ್ಯಾರ್ಥಿಗಳಿಗೆ, ‘ಬಾಲ’ ವಿಭಾಗ 5ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಮತ್ತು ‘ಕಿಶೋರ’ ವಿಭಾಗ 8ರಿಂದ 10ನೇ ತರಗತಿಯವರಿಗೆ ಬೆಳಿಗ್ಗೆ 9ರಿಂದ ಸ್ಪರ್ಧೆಗಳು ನಡೆಯಲಿವೆ.
ಕಥೆ ಹೇಳುವುದು, ಚಿತ್ರ ಬಿಡಿಸುವುದು, ರಂಗೋಲಿ ಹಾಕುವುದು, ಕರ್ನಾಟಕ ಶಾಸ್ತ್ರೀಯ ಸಂಗೀತ, ಭರತನಾಟ್ಯ, ಭಜನೆ, ಕುಣಿತ ಭಜನೆ, ಕೊಟ್ಟಿಗೆ ಕಟ್ಟುವ ಸ್ಪರ್ಧೆ, ಏಕಪಾತ್ರಾಭಿನಯ, ಭಾವಗೀತೆ, ಜಾನಪದ ನೃತ್ಯ ಹಾಗೂ ಗೀತಾ ಕಂಠ ಪಾಠ ಸ್ಪರ್ಧೆಗಳು ಇರುತ್ತವೆ.
ಗೂಗಲ್ ಪಾರ್ಮ್ ಲಿಂಕ್ ಹಾಗೂ ಸ್ಪರ್ಧೆಯ ನಿಯಮಗಳು ಶಾಲಾ ವೆಬ್ ಸೈಟ್ www.sharadavidyalaya.inನಲ್ಲಿ ಲಭ್ಯವಿದೆ. ಮಾಹಿತಿಗೆ (0824- 2492628/2493089/9019730479) ಸಂಪರ್ಕಿಸಬಹುದು.