ನಂಜನಗೂಡು : ನಂಜನಗೂಡಿನ ಶಂಕರ ಮಠದಲ್ಲಿ ಶ್ರೀ ಗುರುಚರಿತ್ರೆ ಪಾರಾಯಣ ಸಪ್ತಾಹ ದಿನಾಂಕ 02 ಫೆಬ್ರವರಿ 2025 ರಿಂದ 09 ಫೆಬ್ರವರಿ 2025ರ ವರೆಗೆ ನಡೆಯಲಿದ್ದು, ಇದರ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ.
ದಿನಾಂಕ 02 ಫೆಬ್ರವರಿಯಂದು ವಿದ್ವಾನ್ ನಾಗಚೇತನ್ ಇವರಿಂದ ‘ಶ್ರೀ ಮದ್ವಾಲ್ಮೀಕಿ ರಾಮಾಯಣ’ದ ಸಂಗೀತ ಪ್ರವಚನ ನಡೆಯಲಿದ್ದು, ಫೆಬ್ರವರಿ 3 ರಂದು ವಿದ್ವಾನ್ ಎಂ. ಎಸ್. ದೀಪಕ್ ಮತ್ತು ತಂಡದವರಿಂದ ಹಾಡುಗಾರಿಕೆ ನಡೆಯಲಿದೆ. ಫೆಬ್ರವರಿ 4ರಂದು ವಿದುಷಿ ಶ್ರೀಮತಿ ರಕ್ಷಿತಾ ವಿಕ್ರಂ ಸಿಂಹ ಇವರಿಂದ ತಂಜಾವೂರಿನ ಶೈಲಿಯ ಭರತನಾಟ್ಯ ನಡೆಯಲಿದ್ದು, ಫೆಬ್ರವರಿ 5ರಂದು ಕುಮಾರಿ ಅಮೃತವರ್ಷಿಣಿ ಭಾರ್ಗವ ಹಾಗೂ ವಿಶ್ವೇಶ್ವರ ಭಾರ್ಗವ ಇವರಿಂದ ಹಾಡುಗಾರಿಕೆ, ಫೆಬ್ರವರಿ 6ರಂದು ಕುಮಾರಿ ಎಮ್. ಎಸ್. ಕೀರ್ತನ ಇವರಿಂದ ಹಾಡುಗಾರಿಕೆ, ಫೆಬ್ರವರಿ 07 ರಂದು ವಿದ್ವಾನ್ ಶ್ರೀ ರಾಮಶಾಸ್ತ್ರೀ ಮತ್ತು ತಂಡದವರಿಂದ ಹಾಡುಗಾರಿಕೆ ಹಾಗೂ ದಿನಾಂಕ 08 ಫೆಬ್ರವರಿ 2025ರಂದು ವಿದ್ವಾನ್ ಅಂಬಾಪ್ರಸಾದ್ ಇವರಿಂದ ವಯಲಿನ್ ವಾದನ ನಡೆಯಲಿದೆ.
Subscribe to Updates
Get the latest creative news from FooBar about art, design and business.