ಮಂಗಳೂರು : ಖ್ಯಾತ ಯಕ್ಷಗಾನ ಕಲಾವಿದ, ಪ್ರಸಂಗಕರ್ತ ಹಾಗೂ ಹವ್ಯಾಸಿ ಪತ್ರಕರ್ತರಾದ ತಾರಾನಾಥ ವರ್ಕಾಡಿ ಮಂಡಿಸಿದ ‘ಕರಾವಳಿ ಕರ್ನಾಟಕದ ಯಕ್ಷಗಾನ ವೃತ್ತಿ ರಂಗಭೂಮಿಯ ಬಹುಮುಖಿ ಅಧ್ಯಯನ’ ಎಂಬ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಡಿ. ಲಿಟ್ ಪದವಿ ನೀಡಿದೆ.
ಇದು ವೃತ್ತಿಪರ ಯಕ್ಷಗಾನ ಕಲಾವಿದರ ಸಾಧನೆ ಎಂಬುದು ಗಮನಾರ್ಹ. ಕಟೀಲು, ಧರ್ಮಸ್ಥಳ ಮೊದಲಾದ ಮೇಳಗಳಲ್ಲಿ ಸುಮಾರು 4ದಶಕಗಳ ಕಾಲ ತಿರುಗಾಟ ನಡೆಸಿದ ವರ್ಕಾಡಿಯವರು ಯಕ್ಷಗಾನ ವೇಷಧಾರಿ ಹಾಗೂ ತಾಳಮದ್ದಳೆ ಅರ್ಥದಾರಿಯಾಗಿ ಜನಮನ್ನಣೆ ಪಡೆದ ಕಲಾವಿದ. ಕನ್ನಡ ಹಾಗೂ ತುಳುವಿನಲ್ಲಿ ಅನೇಕ ‘ಯಕ್ಷಗಾನ ಪ್ರಸಂಗ ರಚಿಸಿರುವ ಇವರು ಆಯುರ್ವೇದ, ಜ್ಯೋತಿಷ್ಯ, ವಾಸ್ತುತಜ್ಞರಾಗಿಯೂ ಪರಿಚಿತರು.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿದ್ದ ಅವರ ಬಹುಮುಖ ಚಟುವಟಿಕೆಗಳಿಗಾಗಿ ಅನೇಕ ಸಂಘ- ಸಂಸ್ಥೆಗಳು ಅವರನ್ನು ಗೌರವಿಸಿವೆ.
Subscribe to Updates
Get the latest creative news from FooBar about art, design and business.