ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಗೌರವ ಕೋಶಾಧ್ಯಕ್ಷರಾಗಿ ಕೆನರಾ ಬ್ಯಾಂಕ್ ಇದರ ಡಿವಿಜನಲ್ ಮ್ಯಾನೇಜರ್ ಆಗಿ ನಿವೃತ್ತರಾಗಿರುವ ಹಾಗೂ ಹಣಕಾಸು, ಆಡಳಿತ ಕ್ಷೇತ್ರದಲ್ಲಿ ಅಪಾರ ಅನುಭವವನ್ನು ಪಡೆದಿರುವ ಡಿ. ಆರ್. ವಿಜಯ ಕುಮಾರ್ ದಿನಾಂಕ 09 ಜುಲೈ 2025 ರಂದು ಅಧಿಕಾರವನ್ನು ಸ್ವೀಕರಿಸಿದರು.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿವಿಧ ಆರ್ಥಿಕ ಮತ್ತು ಆಡಳಿತಾತ್ಮಕ ಜವಾಬ್ದಾರಿಗಳಲ್ಲಿ 38 ವರ್ಷಗಳ ಸಾರ್ಥಕ ಸೇವೆಯನ್ನು ಸಲ್ಲಿಸಿರುವ ಇವರು ನಿವೃತ್ತಿಯ ನಂತರ ವಕೀಲಿ ವೃತ್ತಿಯನ್ನೂ ಕೂಡ ಕೈಗೊಂಡಿದ್ದವರು. ಕನ್ನಡ ಭಾಷೆ ಮತ್ತು ಸಾಹಿತ್ಯದ ಕುರಿತು ಅಪಾರ ಒಲವನ್ನು ಹೊಂದಿರುವ ಇವರು ಈ ಕುರಿತು ಅಧ್ಯಯನವನ್ನೂ ನಡೆಸಿರುವವರು, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಕೂಡ ಇವರು ಸಕ್ರಿಯರಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆ 9(3)ರಲ್ಲಿ ಮಾನ್ಯ ಅಧ್ಯಕ್ಷರಿಗೆ ದತ್ತವಾದ ಅಧಿಕಾರದನ್ವಯ ಈ ನಾಮ ನಿರ್ದೇಶನವನ್ನು ಮಾಡಲಾಗಿದೆ.
ವಿಜಯಕುಮಾರ್ ಅವರ ಕನ್ನಡ ಭಾಷೆ ಮತ್ತು ಸಾಹಿತ್ಯದ ಕುರಿತ ಪ್ರೀತಿ, ಆಡಳಿತಾತ್ಮಕ ಮತ್ತು ಕಾನೂನು ಕ್ಷೇತ್ರದಲ್ಲಿರುವ ಅಪಾರ ತಿಳುವಳಿಕೆ ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತದಲ್ಲಿ ಸ್ಪಷ್ಟತೆ ಮತ್ತು ಪಾರದರ್ಶಕತೆಯನ್ನು ತಂದು ಕೊಡುತ್ತದೆ ಎಂದು ಆಶಿಸಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ವಿಜಯ ಕುಮಾರ್ ಅವರ ಮಾರ್ಗದರ್ಶನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತ ಹೊಸ ರೂಪವನ್ನು ಪಡೆಯುವ ವಿಶ್ವಾಸವನ್ನು ಹೊಂದಿರುವುದಾಗಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಗೌರವ ಕೋಶಾಧ್ಯಕ್ಷರಾಗಿ ಡಿ. ಆರ್. ವಿಜಯ ಕುಮಾರ್ ಅಧಿಕಾರ ಸ್ವೀಕಾರ
No Comments1 Min Read
Previous Articleಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯಿಂದ ಮಾಹಿತಿದಾರರಾಗಲು ಅರ್ಜಿ ಆಹ್ವಾನ
Next Article ಯಕ್ಷ ಮೇನಕಾ ಮೂಡುಬಿದಿರೆ ಇದರ 17ನೇ ವರ್ಷದ ಕಾರ್ಯಕ್ರಮ