ದುಬೈ : ಯಕ್ಷಗಾನ ಅಭ್ಯಾಸ ಕೇಂದ್ರ ದುಬೈ ಯು. ಎ. ಇ. ಪ್ರಸ್ತುತಪಡಿಸಿದ “ದುಬೈ ಯಕ್ಷೋತ್ಸವ 2024- ದಾಶರಥಿ ದರ್ಶನ” ಯಕ್ಷಗಾನ ಪ್ರದರ್ಶನ ಕಾರ್ಯಕ್ರಮವು ದಿನಾಂಕ 09-06-2024 ರಂದು ದುಬೈಯ ಶೇಖ್ ರಶೀದ್ ಆಡಿಟೋರಿಯಂನಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತು.
ರಾಮಾಯಣ ಕಥೆ ಆಧಾರಿತ ‘ದಾಶರಥಿ ದರ್ಶನ’ ಯಕ್ಷಗಾನ ಪ್ರದರ್ಶನ ಅಪಾರ ಜನಮೆಚ್ಚುಗೆಗೆ ಪಾತ್ರವಾಗಿ ಮುಖತಃ ನೋಡಿದ ಹಾಗೂ ಜಾಲತಾಣಗಳ ಮೂಲಕವಾಗಿ ನೋಡಿದ ದೇಶ ವಿದೇಶದ ಕಲಾಭಿಮಾನಿಗಳ ಮುಕ್ತ ಕಂಠದ ಪ್ರಶಂಸೆಗೆ ಪಾತ್ರವಾಯಿತು. ಪ್ರಾರಂಭದಲ್ಲಿ ಭಜನೆ ಬಳಿಕ ಚೌಕಿ ಪೂಜೆ, ಪೂರ್ವರಂಗ ಪ್ರದರ್ಶನದ ಮೂಲಕ ರಂಗಚಾಲನೆ ಪಡೆಯಿತು. ಪೂರ್ವರಂಗದಲ್ಲಿ ಕಾಣಿಸಿಕೊಂಡ ಯಕ್ಷಗಾನದ ಪ್ರಾಚೀನ ಪರಂಪರೆಯ ಗಣಪತಿ ಕೌತುಕ ಸರ್ವರ ಮೆಚ್ಚುಗೆಗೆ ಪಾತ್ರವಾಯಿತು.
ದುಬೈ ಯಕ್ಷಗಾನ ಅಭ್ಯಾಸ ಕೇಂದ್ರ ಪ್ರಾಯೋಜಿತ ‘ಯಕ್ಷಶ್ರೀ ರಕ್ಷಾ’ ಗೌರವ ವಾರ್ಷಿಕ ವಿಶೇಷ ಪ್ರಶಸ್ತಿ -2024ನ್ನು ಸ್ಥಳೀಯ ಯಕ್ಷಗಾನ ಹಿಮ್ಮೇಳ ಕಲಾವಿದ ವೆಂಕಟೇಶ ಶಾಸ್ತ್ರಿ ಪುತ್ತಿಗೆ ಇವರಿಗೆ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಉದ್ಯಮಿ ಶಶಿಧರ್ ಶೆಟ್ಟಿ ಬರೋಡ, ಭೀಮ ಜ್ಯುವೆಲ್ಲರಿಯ ನಾಗರಾಜ ರಾವ್, ಅಲ್ ಫರ್ದಾನ್ ಎಂಜ್ ನ ಅಧಿಕಾರಿಗಳು, ಗಣ್ಯರಾದ ಸರ್ವೋತ್ತಮ ಶೆಟ್ಟಿ, ಪುತ್ತಿಗೆ ವಾಸುದೇವ ಭಟ್, ಸತೀಶ್ ಪೂಜಾರಿ, ಹರೀಶ್ ಶೇರಿಗಾರ್ ಉಪಸ್ಥಿತರಿದ್ದರು.