ಮಣಿಪಾಲ : ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ಮಣಿಪಾಲ ಸಮೀಪದ ಶಿವಳ್ಳಿ ಗ್ರಾಮ ಮೂಡು ಪೆರಂಪಳ್ಳಿಯ ಶ್ರೀ ಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಉತ್ಸವದ ಅಂಗವಾಗಿ ದಿನಾಂಕ 20 ಜನವರಿ 2026ನೇ ಮಂಗಳವಾರ ‘ದಕ್ಷ ಯಜ್ಞ’ ಎಂಬ ತಾಳಮದ್ದಳೆಯು ಶ್ರೀ ದೇವಳದ ಪ್ರಾಂಗಣದಲ್ಲಿ ನಡೆಯಿತು .
ಹಿಮ್ಮೇಳದಲ್ಲಿ ಭಾಗವತರಾಗಿ ನಾರಾಯಣ ಶಬರಾಯ ಹಾಗೂ ಚೆಂಡೆ, ಮದ್ದಳೆಗಳಲ್ಲಿ ಬಸವ ಮುಂಡಾಡಿ, ರಾಮ ಬಾಯಿರಿ ಸಹಕರಿಸಿದರು. ಮುಮ್ಮೇಳದಲ್ಲಿ ಶ್ರೀಮತಿಯರಾದ ಶುಭಾ ಜೆ.ಸಿ. ಅಡಿಗ (ಈಶ್ವರ), ಕಿಶೋರಿ ದುಗ್ಗಪ್ಪ ನಡುಗಲ್ಲು (ದಾಕ್ಷಾಯಿಣಿ), ಹರಿಣಾಕ್ಷಿ ಜೆ. ಶೆಟ್ಟಿ (ದಕ್ಷ ), ರಾಜಶ್ರೀ ಶಬರಾಯ (ಬ್ರಾಹ್ಮಣ), ವಿದ್ಯಾಲಕ್ಷ್ಮಿಆರ್. ಭಟ್ (ದೇವೇಂದ್ರ), ಕುಮಾರಿ ಅನನ್ಯ ಮಂಡೆಚ್ಚ (ಮರೀಚಿ ಬ್ರಹ್ಮ), ಕುಮಾರಿ ಅದಿತಿ ಮಂಡೆಚ್ಚ (ವೀರಭದ್ರ) ಸಹಕರಿಸಿದರು. ಸಂಚಾಲಕ ಭಾಸ್ಕರ್ ಬಾರ್ಯ ಸ್ವಾಗತಿಸಿ, ಹರಿಕೃಷ್ಣ ಶಿವತ್ತಾಯ ವಂದಿಸಿ, ರಾಜಶೇಖರ ಶಿವತ್ತಾಯ ಕಲಾವಿದರನ್ನು ಅಭಿನಂದಿಸಿದರು. ರಾಜಶ್ರೀ ಶಬರಾಯ, ನಾರಾಯಣ ಶಬರಾಯ ದಂಪತಿಗಳು ಮತ್ತು ಸಹೋದರಿಯರು ಪ್ರಾಯೋಜಿಸಿದ್ದರು.

