ದಕ್ಷಿಣ ಕೊರಿಯಾ : ಮಂಗಳೂರಿನ ನೃತ್ಯ ಸಂಸ್ಥೆಗಾನ ನೃತ್ಯ ಅಕಾಡೆಮಿಯ ತಂಡವು ಕೇಂದ್ರ ಸರಕಾರದ ವಿದೇಶಾಂಗ ವ್ಯವಹಾರ ಸಚಿವಾಲಯದ ಪ್ರಾಯೋಜಕತ್ವದಲ್ಲಿ ದಕ್ಷಿಣ ಕೊರಿಯಾದಲ್ಲಿ ಭರತನಾಟ್ಯ ಕಾರ್ಯಕ್ರಮಗಳನ್ನು ನೀಡಿರುತ್ತದೆ. ದಿನಾಂಕ 06-10-2023ರಿಂದ 12-10-2023ರವರೆಗೆ ದಕ್ಷಿಣ ಕೊರಿಯಾದ ವಿವಿಧ ಪ್ರತಿಷ್ಠಿತ ವೇದಿಕೆಗಳಲ್ಲಿ ನೃತ್ಯ ಕಾರ್ಯಕ್ರಮಗಳು, ಪ್ರಾತ್ಯಕ್ಷಿಕೆ ಹಾಗೂ ಕಾರ್ಯಾಗಾರಗಳನ್ನು ಸಂಸ್ಥೆಯ ನಿರ್ದೇಶಕಿ ವಿದ್ಯಾಶ್ರೀ ರಾಧಾಕೃಷ್ಣ ನಡೆಸಿಕೊಟ್ಟಿದ್ದಾರೆ.
ಭಾರತಿಯ ಸಂಸ್ಕೃತಿ ಸಚಿವಾಲಯದ ಅಂಗ ಸಂಸ್ಥೆಯಾದ ಐ.ಸಿ.ಸಿ.ಆರ್. (ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ಸ್)ನ ದಾಖಲಿತ ಕಲಾವಿದೆಯಾಗಿರುವ ವಿದ್ಯಾಶ್ರೀ ರಾಧಾಕೃಷ್ಣ ಭಾರತವನ್ನು ಪ್ರತಿನಿಧಿಸಿ ಐ.ಸಿ.ಸಿ.ಆರ್. ಪ್ರಾಯೋಜಿತ ನೃತ್ಯ ಪ್ರವಾಸ ಮಾಡಿದ ಮಂಗಳೂರಿನ ಪ್ರಥಮ ಕಲಾವಿದೆಯಾಗಿದ್ದಾರೆ. ತಂಡದಲ್ಲಿ ವಿದ್ಯಾಶ್ರೀ ಶಿಷ್ಯೆಯರಾದ ಅಂಕಿತಾ ರೈ, ಮೇಘ ಮಲರ್ ಪ್ರಭಾಕರ್, ತ್ವಿಷಾ ಶೆಟ್ಟಿ, ದಿಶಾ ಗಿರೀಶ್, ಪೂರ್ವೀಕೃಷ್ಣಾ ಹಾಗೂ ಬಿಲ್ವ ಕಲಾ ಸಂಸ್ಥೆಯ ನಿರ್ದೇಶಕಿ ರಶ್ಮಿ ಉಡುಪ ಹಾಗೂ ತಾಂತ್ರಿಕ ಸಹಕಾರಕ್ಕಾಗಿ ರಾಧಾಕೃಷ್ಣ ಭಟ್ ಭಾಗವಹಿಸಿದ್ದರು.
 
 
 
 
 
 
 
									 
					