ಕಮತಗಿ : ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ (ರಿ.) ಕಮತಗಿ ಹಾಗೂ ದಸರಾ ಉತ್ಸವ ಸಮಿತಿ ವತಿಯಿಂದ ‘ದಸರಾ ಉತ್ಸವ-2025’ ದಿನಾಂಕ 30 ಸೆಪ್ಟೆಂಬರ್ 2025ರಂದು ಬಾಗಲಕೋಟೆ ಜಿಲ್ಲೆಯ ಕಮತಗಿಯ ಕಿಲ್ಲಾ ಓಣಿ ಶ್ರೀ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನದ ಹತ್ತಿರ ನಡೆಯಲಿದೆ. ಕವಿಗೋಷ್ಠಿ, ವಿಚಾರಗೋಷ್ಠಿ, ಪುಸ್ತಕ ಬಿಡುಗಡೆ, ಪುಸ್ತಕ ಪ್ರಶಸ್ತಿ ಪ್ರದಾನ, ಜಾನಪದ ಕಲಾ ಪ್ರದರ್ಶನ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಜಾನಪದ ಕಲಾವಿದೆ ಮಾತಾ ಮಂಜಮ್ಮ ಜೋಗುತಿ ಇವರು ವಹಿಸಲಿದ್ದು, ಚಂದ್ರಶೇಖರ ದೇಸಾಯಿ ಇವರು ದಸರಾ ಉತ್ಸವದ ಉದ್ಘಾಟನೆ ಮಾಡಲಿದ್ದಾರೆ. ಹಿರಿಯ ಜಾನಪದ ಕಲಾವಿದ ವೆಂಕಪ್ಪ ಸುಗತೇಕರ ಇವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಹಿರಿಯ ಸಾಹಿತಿ ಡಾ. ಶಿವಾನಂದ ಕುಬಸದ ಇವರು ವೆಂಕಟೇಶ ಗುಡ್ಡೆಪ್ಪನವರ ಇವರ ‘ದಮನಿತರ ಧ್ವನಿ’ ಕೃತಿಯನ್ನು ಬಿಡುಗಡೆಗೊಳಿಸಲಿದ್ದಾರೆ. ಹಿರಿಯ ಸಾಹಿತಿ ಡಾ. ಅಶೋಕ ನರೋಡೆ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಮತ್ತು ಸಾಹಿತಿ ಕಿರಣ ಬಾಳಗೊಳ ಇವರ ಅಧ್ಯಕ್ಷತೆಯಲ್ಲಿ ನಡೆಯುವ ವಿಚಾರಗೋಷ್ಠಿಯಲ್ಲಿ ‘ನಾಡ ಹಬ್ಬವಾಗಿ ದಸರಾ ಆಚರಣೆ’ ಎಂಬ ವಿಷಯದಲ್ಲಿ ಸಾಹಿತಿ ರವಿ ಕಂಗಳ ಮತ್ತು ‘ಭಾರತೀಯ ಹಬ್ಬದ ಆಚರಣೆಗಳು ಮತ್ತು ಸೌಹಾರ್ಧತೆ’ ಎಂಬ ವಿಷಯದಲ್ಲಿ ಸಾಹಿತಿ ಚಂದ್ರಶೇಖರ ಹೆಗಡೆ ವಿಷಯ ಮಂಡನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ‘ಮೇಘಮೈತ್ರಿ ಪುಸ್ತಕ ಪ್ರಶಸ್ತಿ’, ‘ಮೇಘಮೈತ್ರಿ ಸಾಂಸ್ಕೃತಿಕ ಪ್ರಶಸ್ತಿ’ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಜಾನಪದ ಕಲಾ ತಂಡಗಳಿಂದ ಪ್ರದರ್ಶನ ನಡೆಯಲಿದೆ.