ಮಂಗಳೂರು : ಕೋಡಿಕಲ್ ನ ವಿಪ್ರವೇದಿಕೆಯ ದಶಮಾನೋತ್ಸವ ಸರಣಿಯ ಷಷ್ಠಿ ಕಾರ್ಯಕ್ರಮ ‘ಗೀತ-ನೃತ್ಯ ಸಂಭ್ರಮ’ ಕಾರ್ಯಕ್ರಮವು ದಿನಾಂಕ 02 ನವೆಂಬರ್ 2025ರಂದು ನಡೆಯಿತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಎಂ.ಸಿ.ಎಫ್.ನ ನಿವೃತ್ತ ಹಿರಿಯ ಅಧಿಕಾರಿ ಗೋಪಾಲಕೃಷ್ಣ ರಾವ್ ರವರು “ನಮ್ಮ ದೇಶ ಸನಾತನ ಕಾಲದಿಂದಲೂ ನಮ್ಮ ಹಿರಿಯರು ಆಚರಿಸಿಕೊಂಡು ಬರುತ್ತಿರುವ ಕಲೆ – ಸಂಸ್ಕೃತಿಯ ಆಧಾರದ ಮೇಲೆ ನಿಂತಿದೆ. ಎಂತಹಾ ಕಠಿಣ ಸನ್ನಿವೇಶಗಳು ಬಂದರೂ ಕಲಾಪ್ರಕಾರಗಳ ವೀಕ್ಷಣೆಯಿಂದ ಮನಸ್ಸು ಮುದಗೊಳ್ಳುತ್ತದೆ. ಸಂಸ್ಕೃತಿಯ ಅಭ್ಯಸಿಸುವಿಕೆಯಿಂದ ನಾವೆಲ್ಲಿದ್ದೇವೆ ಎಂಬುದರ ಸಿಂಹಾವಲೋಕನ ಮಾಡಿ ಮುಂದುವರಿಯಲು ಸಾಧ್ಯವಾಗುತ್ತದೆ. ಅದನ್ನೇ ನಮ್ಮ ಮುಂದಿನ ಪೀಳಿಗೆಗೆ ವರ್ಗಾಯಿಸಲು ಸಾಧ್ಯವಾಗುತ್ತದೆ. ಮೈಕುಣಿಸುವ ಸಂಸ್ಕಾರವನ್ನು ಬಿಟ್ಟು ಮನಸ್ಸನ್ನು ಪ್ರಫುಲ್ಲಿಸುವ ಕಲೆ ಈಗಿನ ಕಾಲದ ಒತ್ತಡ. ಈ ಕಲಾ ಶಿಕ್ಷಣ ಚಿಣ್ಣರಿಗೆ ಎಲ್ಲೆಡೆ ದೊರಕಲಿ” ಎಂದು ಹೇಳಿದರು.

ಶ್ರೀ ಅವಿನಾಶ್ ಇವರು ನೃತ್ಯ ಸಂಭ್ರಮ ಕಾರ್ಯಕ್ರಮ ನಿರ್ವಹಿಸಿದರು. ಸ್ವಪ್ನಾ ಅವಿನಾಶ್ ಹಾಗೂ ಸುಧಾ ಭಟ್ ರವರು ವೀಣಾವಾದನವನ್ನು ನಡೆಸಿಕೊಟ್ಟರೆ ಶ್ರೇಯಸ್ ಮೃದಂಗದಲ್ಲಿ ಸಹಕರಿಸಿದರು. ಶ್ರೀಮತಿ ವಿದ್ಯಾಗಣೀಶರವರು ಭರತನಾಟ್ಯ ಕಾರ್ಯಕ್ರಮ ನಿರ್ವಹಿಸಿದರು. ಎಂ.ಟೆಕ್. ವಿದ್ಯಾರ್ಥಿನಿ ಕುಮಾರಿ ಅನೋಕ್ಷಾ ಹಾಗೂ ಕುಮಾರಿ ಅದ್ವಿಕಾ ಮಡಿ ಭರತನಾಟ್ಯ ಕಾರ್ಯಕ್ರಮ ನೀಡಿದರು. ಶ್ರೀಮತಿ ಸವಿತಾ ದುರ್ಗಾದಾಸ್ ಸಂಗೀತ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕುಮಾರಿ ದೇವಿಕಾ, ಡಾ. ಮೇಘನಾ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ವೃಂದಾ ವಿ. ಸ್ವಾಗತಿಸಿದರೆ, ಶ್ರೀಮತಿ ವಿಜಯಾ ಭಟ್ ಧನ್ಯವಾದವಿತ್ತರು. ವೇದಿಕೆಯ ಹಿರಿಯ ಸದಸ್ಯರಾದ ವಿ.ಎಸ್. ಹೆಬ್ಬಾರರು ಸ್ಮರಣಿಕೆಗಳನ್ನು ನೀಡಿದರು. ಟ್ರಸ್ಟಿಗಳಾದ ವಿಶ್ವ ಕುಮಾರ್ ಜೋಯಿಸರು, ಜಯರಾಮ ಪದಕಣ್ಣಾಯ, ಅನೂಪ್ ರಾವ್ ಬಾಗ್ಲೋಡಿ, ಗಿರೀಶ್ ರಾವ್, ಪ್ರಭಾವತಿ ಮಡಿ, ವರ್ಕಾಡಿ ರವಿ ಅಲೆವೂರಾಯ, ವಿಶ್ವೇಶ್ವರ ಭಟ್, ಟಿ. ದುರ್ಗಾದಾಸ್ ಕಟೀಲ್, ಕಿಶೋರ್ ಕೃಷ್ಣ, ಶಿವಾನಂದ ಐಗಳ್ ಹಾಗೂ ವೇದಿಕೆಯ ಹಿರಿಯರು ಹಾಗೂ ವಿಪ್ರ ಬಂಧುಗಳು ಉಪಸ್ಥಿತರಿದ್ದರು.
