ಬೆಂಗಳೂರು: ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ ) ಇದರ 25 ವರ್ಷಗಳ ಬೆಳ್ಳಿ ಹಬ್ಬದ ಸಂಭ್ರಮದ ಅಂಗವಾಗಿ ರಾಜ್ಯ ಮಟ್ಟದ 13ನೇ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಮಾವೇಶವು ದಿನಾಂಕ 26/10/2023 ಗುರುವಾರ ನಡೆಯಲಿದೆ. ಬೆಳಗ್ಗೆ 9:30 ರಿಂದ ಸಂಜೆ 5:30 ವರೆಗೆ ಶೇಷಾದ್ರಿಪುರಂ ಮೈನ್ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿರುವ ಈ ಕಾರ್ಯಕ್ರಮ ಹಿರಿಯ ಸಾಹಿತಿ, ಸಂಶೋಧಕರಾದ ಡಾ.ಕೆ.ಜಿ.ಲಕ್ಷ್ಮೀನಾರಾಯಣಪ್ಪ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿದೆ.
ಸಮಾರಂಭದಲ್ಲಿ ಭಾಗವಹಿಸಲಿಚ್ಚಿಸುವ ಪ್ರತಿನಿಧಿಗಳು, ಸಮೂಹ ನೃತ್ಯ,ಸಮೂಹ ಗಾಯನ ನಡೆಸಿಕೊಡುವವರು, ಕವಿಗೋಷ್ಠಿಯಲ್ಲಿ ಭಾಗವಹಿಸಲಿಚ್ಚಿಸುವವರು, ಕನಿಷ್ಠ ಹತ್ತು ವರ್ಷಗಳು ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ ವಿವಿಧ ಕ್ಷೇತ್ರಗಳಲ್ಲಿನ ಸಾಧಕರ ಕಿರು ಪರಿಚಯವನ್ನು ನಮ್ಮ ಟ್ರಸ್ಟ್ ನ ವಿವಿಧ ದತ್ತಿ ಪ್ರಶಸ್ತಿಗೆ ಶಿಫಾರಸು ಮಾಡಿ 10/10/2023 ರ ಒಳಗೆ ಕಳುಹಿಸಬಹುದು. ಆಯ್ಕೆ ಆದವರಿಗೆ ಕರೆ ಮಾಡಿ ತಿಳಿಸಲಾಗುವುದು.
1.ದೊಡ್ಡಬಳ್ಳಾಪುರದ ಸಾಹಿತಿ ಶ್ರೀಮತಿ ಶ್ರೀ ರೇಣುಕಾ ನಾಗಪ್ರಿಯ ದತ್ತಿ 2.ಮಾಗಡಿವಿಜಯಾನಾಗೇಶ್ ಯುವ ಮಹಿಳಾ ಸಾಹಿತ್ಯ ದತ್ತಿ 3.ಕೆ.ಕೃಷ್ಣಮೂರ್ತಿ ಪೂಜಾರಿ ಪಾಳ್ಯ ಗಾಯಕ ಮತ್ತು ಸಮಾಜಸೇವಾ ದತ್ತಿ 4.ಡಾ.ಕೆ.ರಮಾನಂದ ಕಾದಂಬರಿ ದತ್ತಿ ಪುಸ್ತಕ ಬಹುಮಾನ 5 . ಶ್ರೀಮತಿ ಗುಣಸಾಗರಿ ಎಸ್.ನಾಗರಾಜ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ದತ್ತಿ 6. ಹೆಬ್ಬಗೋಡಿ ಗೋಪಾಲಪ್ಪ ಮತ್ತು ರಾಂ.ಕೆ.ಹನುಮಂತಯ್ಯ ಪುಸ್ತಕ ದತ್ತಿ ಬಹುಮಾನ (ಕತೆ,ಕಾವ್ಯ, ಕಾದಂಬರಿ ,ವಿಮರ್ಶೆ ಹಾಗೂ ಒಟ್ಟು ನಾಲ್ಕು ಪ್ರಕಾರಗಳಲ್ಲಿ ಒಂದೊಂದು ಕೃತಿಗಳಿಗೆ)
ಕಾರ್ಯಕ್ರಮ ಸಂಯೋಜಕರು : ಡಾ.ಸಿಸಿರಾ(ರಾಮಲಿಂಗೇಶ್ವರ). ಮೊಬೈಲ್ : 9448880985