ಧಾರವಾಡ : ಅಭಿನಯ ಭಾರತಿ (ರಿ), ಧಾರವಾಡ ಈವರು ಪ್ರೊ. ಕೀರ್ತಿನಾಥ ಕುರ್ತಕೋಟಿ ಸ್ಮರಣಾರ್ಥ ಆಯೋಜಿಸುವ ದತ್ತಿ ಉಪನ್ಯಾಸ ಕಾರ್ಯಕ್ರಮವು ದಿನಾಂಕ 11 ಅಕ್ಟೋಬರ್ 2025ರ ಶನಿವಾರದಂದು ಬೆಳಿಗ್ಗೆ ಘಂಟೆ 11.30ಕ್ಕೆ ಧಾರವಾಡದ ಸುಭಾಷ ರಸ್ತೆಯಲ್ಲಿರುವ ಮನೋಹರ ಗ್ರಂಥ ಮಾಲಾ ಲಕ್ಕಿ ಭವನದಲ್ಲಿ ನಡೆಯಲಿದೆ.
ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್, ಧಾರವಾಡ ಇವರ ಪ್ರಯೋಜಕತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ‘ಕೀರ್ತಿ ಅವರ ಜ್ಞಾನೇಶ್ವರ ಚಿಂತನೆಗಳು’ ವಿಷಯದಲ್ಲಿ ಧಾರವಾಡದ ಹಿರಿಯ ಸಾಹಿತಿಗಳಾದ ಶ್ರೀ ಆನಂದ ಝುಂಜರವಾಡ ಉಪನ್ಯಾಸ ನೀಡಲಿದ್ದಾರೆ.

 
									 
					