ಬೆಂಗಳೂರು : ದ್ರಾವಿಡ ಭಾಷಾ ಅನುವಾದಕರ ಸಂಘ (ಡಿ.ಬಿ.ಟಿ.ಎ.)ದ ವತಿಯಿಂದ ಕೊಡಮಾಡುವ ಪ್ರತಿಷ್ಠಿತ ಡಿ.ಬಿ.ಟಿ.ಎ. ಅನುವಾದ ಪ್ರಶಸ್ತಿಗೆ ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ. ಎ. ಮೋಹನ ಕುಂಟಾರ್ ಆಯ್ಕೆಯಾಗಿದ್ದಾರೆ ಎಂದು ಡಿಬಿಟಿಎ ಸಂಘದ ಅಧ್ಯಕ್ಷೆ ಡಾ. ಸುಷ್ಮಾ ಶಂಕರ್ ತಿಳಿಸಿದ್ದಾರೆ.
ಜ್ಞಾನಪೀಠ ಪ್ರಶಸ್ತಿ ವಿಜೇತ ಮಲಯಾಳಂ ಸಾಹಿತಿ ತಕಳಿ ಶಿವಶಂಕರ ಪಿಳ್ಳೆ ಅವರ ಪ್ರಸಿದ್ಧ ಕಾದಂಬರಿ ‘ಚೆಮ್ಮೀನ್’ನ ಕನ್ನಡ ಅನುವಾದಕ್ಕೆ ಪ್ರಶಸ್ತಿ ಲಭಿಸಿದೆ. ಡಿ.ಬಿ.ಟಿ.ಎ. ವತಿಯಿಂದ ನೀಡುತ್ತಿರುವ ಈ ಪ್ರಶಸ್ತಿಯು ರೂ.11,111/- ನಗದು, ಪ್ರಶಸ್ತಿ ಪತ್ರ ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 26 ಸೆಪ್ಟೆಂಬರ್ 2025ರಂದು ನಯನ ಸಭಾಂಗಣದಲ್ಲಿ ಜರುಗಲಿದೆ.