ಮಂಗಳೂರು : ಕಲೆ ಮತ್ತು ಸಾಹಿತ್ಯಕ್ಕೆ ಸಮರ್ಪಿತವಾದ ರಾಷ್ಟ್ರೀಯ ಸಂಸ್ಥೆ ‘ಸಂಸ್ಕಾರ ಭಾರತೀ ಕರ್ನಾಟಕ’ ದಕ್ಷಿಣ ಪ್ರಾಂತ ಮಂಗಳೂರು ಮಹಾನಗರ ಇದರ ವತಿಯಿಂದ ‘ದೀಪಾವಳಿ ಕುಟುಂಬ ಮಿಲನ’ ಕಾರ್ಯಕ್ರಮವನ್ನು ದಿನಾಂಕ 31 ಅಕ್ಟೋಬರ್ 2025ರಂದು ಸಂಜೆ 6-30 ಗಂಟೆಗೆ ಮಂಗಳೂರು ಅಡ್ಯಾರ್ ಶ್ರೀ ವೀರಾಂನೇಯ ಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಕೊಲ್ಯ ನಾಟ್ಯನಿಕೇತನ, ಮಂಗಳೂರು ಸನಾತನ ನಾಟ್ಯಾಲಯ ಮತ್ತು ಕೊಟ್ಟಾರ ಭಾರತಾಂಜಲಿ ಇವರಿಂದ ನೃತ್ಯ ವೈವಿದ್ಯ ಮತ್ತು ಶ್ರೀ ಬಾಲಕೃಷ್ಣ ಕತ್ತಲ್ ಸಾರ್ ಮತ್ತು ಬಳಗದವರಿಂದ ತುಳುನಾಡ ಬಲೀಂದ್ರ ಲೆಪ್ಪುದ ಪೊರ್ಲು ಪಸ್ತುತಗೊಳ್ಳಲಿದೆ. ವಿವಿಧ ಕ್ಷೇತ್ರದ ಸಾಧಕರಿಗೆ ‘ಸಂಸ್ಕಾರ ಭಾರತೀ ಸೇವಾ ಪುರಸ್ಕಾರ’ ಪ್ರದಾನ ಮಾಡಲಾಗುವುದು.

