ಮಂಗಳೂರು : ಲಲಿತ ಕಲೆಗಳ ಸಂವರ್ಧನೆಗಾಗಿ ಸಮರ್ಪಿತವಾದ ಅಖಿಲ ಭಾರತಿಯ ಸಂಘಟನೆಯಾದ ಸಂಸ್ಕಾರ ಭಾರತೀ ವತಿಯಿಂದ ‘ದೀಪಾವಳಿ ಕುಟುಂಬ ಮಿಲನ’ ಕಾರ್ಯಕ್ರಮವು ದಿನಾಂಕ 25-11-2023 ಶನಿವಾರದಂದು ಸಂಜೆ ಗಂಟೆ 4ಕ್ಕೆ ಶರವು ದೇವಸ್ಥಾನದ ಬಳಿಯಿರುವ ಬಾಳಂಭಟ್ ಹಾಲ್ ಇಲ್ಲಿ ನಡೆಯಲಿದೆ.
ಸಂಜೆ ಗಂಟೆ 4ರಿಂದ ಸರಯೂ ಯಕ್ಷ ಬಳಗ, ಕೋಡಿಕಲ್ ಇವರಿಂದ ವರ್ಕಾಡಿ ರವಿ ಅಲೆವೂರಾಯ ಇವರ ನಿರ್ದೇಶನದಲ್ಲಿ ‘ಮಹರ್ಷಿ ವಾಲ್ಮೀಕಿ’ ಯಕ್ಷಗಾನ ಬಯಲಾಟ ಮತ್ತು ಶ್ರೀ ಬಾಲಕೃಷ್ಣ ಕತ್ತಲ್ಸಾರ್ ಮತ್ತು ಬಳಗದವರಿಂದ ‘ತುಳುನಾಡ ಬಲೀಂದ್ರ ಲೆಪ್ಪುದ ಪೊರ್ಲು’ ಪ್ರದರ್ಶನ ನಡೆಯಲಿದೆ.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಕಾರ ಭಾರತೀ ಇದರ ಅಧ್ಯಕ್ಷರಾದ ಶ್ರೀ ಪುರುಷೋತ್ತಮ ಕೆ. ಭಂಡಾರಿ ಅಡ್ಯಾರ್ ಇವರು ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಆರ್.ಕೆ. ಟ್ರಾವೆಲ್ಸ್ ಇದರ ಮಾಲಕರಾದ ಅಡ್ಯಾರ್ ಮಾಧವ ನಾಯ್ಕ್ ಭಾಗವಹಿಸಲಿರುವರು. ಬಾಳಂಭಟ್ ಮನೆತನದ ವೇದ ಸಂಸ್ಕೃತ ವಿದ್ವಾಂಸರಾದ ವಿದ್ವಾನ್ ಡಾ. ಸತ್ಯ ಕೃಷ್ಣ ಭಟ್ ಇವರು ಮುಖ್ಯ ಭಾಷಣ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ‘ಸಂಸ್ಕಾರ ಭಾರತೀ ಕಲಾ ಪುರಸ್ಕಾರ’ ಶ್ರೀ ತೋನ್ಸೆ ಪುಷ್ಕಳ ಕುಮಾರ್ (ಸಂಗೀತ), ಕರ್ನಾಟಕ ಕಲಾಶ್ರೀ ವಿದ್ವಾನ್ ಚಂದ್ರ ಶೇಖರ ನಾವಡ (ನೃತ್ಯ), ಶ್ರೀ ಶರತ್ ಕುಮಾರ್ ಕದ್ರಿ (ಯಕ್ಷಗಾನ), ಶ್ರೀ ಬಿ.ಕೆ. ಗಂಗಾಧರ್ ಕಿರೋಡಿಯನ್ (ನಾಟಕ) ಮತ್ತು ಶ್ರೀ ಬಾಲಕೃಷ್ಣ ಕತ್ತಲ್ಸಾರ್ (ಲೋಕಕಲಾ) ಇವರುಗಳಿಗೆ ಪ್ರದಾನ ಮಾಡಲಾಗುವುದು.
ಸಂಸ್ಕಾರ ಭಾರತೀ ಇದರ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ತಮಗೆಲ್ಲರಿಗೂ ಆದರದ ಸ್ವಾಗತ ಕೋರಿದ್ದಾರೆ.