ಭಾವ ಸಂಗಮ ಮತ್ತು ಉಮಾಶಂಕರ ಪ್ರತಿಷ್ಠಾನ ಸಹಯೋಗದಲ್ಲಿ 31 ಅಕ್ಟೋಬರ್ 2024ರಂದು ರಾಜ್ಯ ಮಟ್ಟದ ಕವನ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಭಾವ ಸಂಗಮ ಸಂಚಾಲಕ ರಾಜೇಂದ್ರ ಪಾಟೀಲ ತಿಳಿಸಿದ್ದಾರೆ.
ಕವನದ ವಿಷಯ: ಕತ್ತಲೆಯಿಂದ ಬೆಳಕಿನೆಡೆಗೆ….
ಕವನಗಳು 20 ಸಾಲುಗಳ ಮಿತಿಯೊಳಗಿರಲಿ. ಯಾವುದೇ ಬಳಗ, ಸಂಘ, ಸಂಸ್ಥೆಗಳಿಗೆ ಸಂಬಂಧಿಸಿದ್ದರೂ ಆವರು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಪರ್ಧೆಗೆ ಮುಕ್ತವಾದ ಅವಕಾಶ ನೀಡಿದೆ. ಒಬ್ಬರು ಒಂದೇ ಕವನ ಕಳುಹಿಸುವುದು. ಕಳುಹಿಸುವ ಮೊದಲೇ ಕವನವನ್ನು ಎರಡು ಮೂರು ಸಲ ಪರಿಶೀಲಿಸಿ ತಿದ್ದುಪಡಿಗಳಿದ್ದಲ್ಲಿ ಮಾಡಿ . ಕಳುಹಿಸಿ. ಪದೇ ಪದೇ ತಿದ್ದುಪಡಿ ಮಾಡಿ ಕಳುಹಿಸಬೇಡಿ. ಮೊದಲ ಸಲ ಕಳಿಸಿದ್ದನ್ನೇ ಸ್ಪರ್ಧೆಗೆ ಪರಿಶೀಲಿಸಲಾಗುತ್ತದೆ.
ಕವನವನ್ನು 31ಅಕ್ಟೋಬರ್ 2024ರಂದು ಸಾಯಂಕಾಲ 4 ರಿಂದ ಸಂಜೆ 9 ರ ಅವಧಿಯೊಳಗೆ ಕಡ್ಡಾಯವಾಗಿ 9591323453 ವಾಟ್ಸಾಪ್ ಸಂಖ್ಯೆಗೆ ಕಳಿಸಬೇಕು. ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು 30 ಅಕ್ಟೋಬರ್ 2024ರ ರಾತ್ರಿ 10 ರೊಳಗೆ ತಮ್ಮ ಹೆಸರುಗಳನ್ನು 9591323453 ವಾಟ್ಸಾಪ್ ಗೆ ಕಳುಹಿಸಿ ನೋಂದಾಯಿಸಿಕೊಳ್ಳುವುದು ಕಡ್ಡಾಯ. ಫೋನ್ ಕರೆಗೆ ಅವಕಾಶ ಮತ್ತು ಸಮಯವಿಲ್ಲವಾದ್ದರಿಂದ ಈ ಮಾಹಿತಿಯನ್ನೇ ಸರಿಯಾಗಿ ಓದಿಕೊಂಡು ಪರಿಶೀಲಿಸಿ ಕವನ ಕಳುಹಿಸಬೇಕು.ತೀರಾ ಅನಿವಾರ್ಯ ಇದ್ದಲ್ಲಿ ವಾಟ್ಸಾಪ್ ಮೆಸೇಜ್ ಮಾಡಬಹುದು.
ಆಯ್ದ ಅತ್ಯುತ್ತಮ ಕವಿತೆಗಳ ಕವಿಗಳಿಗೆ ಭಾವ ಸಂಗಮ ಹನ್ನೊಂದನೇ ವಾರ್ಷಿಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಉಮಾಶಂಕರ ಪ್ರತಿಷ್ಠಾನ ಸಹಯೋಗದಲ್ಲಿ ವಿಶೇಷ ಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡಲಾಗುವುದು. ವಿಜೇತರಿಗೆ ಅಭಿನಂದನಾ ಪತ್ರದೊಂದಿಗೆ ತಲಾ ಐದು ಗ್ರಂಥಗಳ ಉಡುಗೊರೆಯಾಗಿ ನೀಡಲಾಗುವುದು ಎಂದು ಭಾವ ಸಂಗಮ ಸಂಚಾಲಕ ರಾಜೇಂದ್ರ ಪಾಟೀಲ ತಿಳಿಸಿದ್ದಾರೆ.