ಮೂಡುಬಿದಿರೆ : ಯುವ ಲೇಖಕಿ, ವಾಗ್ಮಿ ಹಾಗೂ ಎಬಿವಿಪಿ ಕಾರ್ಯಕರ್ತೆ ರಿಶಲ್ ಬ್ರಿಟ್ನಿ ಫರ್ನಾಂಡಿಸ್ ಇವರು 2025ನೇ ಸಾಲಿನ ‘ದೇಶ್’ ರತ್ನಾ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ದೆಹಲಿಯ ಭಾರತ ಮಂಟಪದಲ್ಲಿ ನಡೆಯುವ ಸಮಾರಂಭದಲ್ಲಿ ವಿವಿಧ ಕೇಂದ್ರ ಹಾಗೂ ರಾಜ್ಯ ಸಚಿವರ ಉಪಸ್ಥಿತಿಯಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ರಿಶಲ್ ಬ್ರಿಟ್ನಿ ಇವರು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಸಾಧನೆಗಳನ್ನು ಗುರುತಿಸಿ ಭಾರತೀಯ ಯುವ ಅಸೋಸಿಯೇಷನ್ ಹಾಗೂ ವಿವಿಧ ಸಚಿವಾಲಯಗಳ ಜಂಟಿ ಆಶ್ರಯದಲ್ಲಿ ಈ ಗೌರವವನ್ನು ನೀಡಲಾಗುತ್ತದೆ. ಈ ಹಿಂದೆ ಇವರು ರಾಜ್ಯ ಸರ್ಕಾರದ ಪ್ರತಿಷ್ಠಿತ ‘ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೂ ಪಾತ್ರರಾಗಿದ್ದರು. ರಿಶಲ್ ಅವರ ಲೇಖನಿಯಿಂದ ಮೂಡಿಬಂದ ಕೃತಿಗಳು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿವೆ. ‘ಭಾರತ್ @2047 ರೋಲ್ ಆಫ್ ಯೂತ್’ ಪುಸ್ತಕವು ಯುವಶಕ್ತಿಯ ಮಹತ್ವದ ಬಗ್ಗೆ ಬೆಳಕು ಚೆಲ್ಲಿದ್ದು, ಸ್ವತಃ ಭಾರತದ ಪ್ರಧಾನ ಮಂತ್ರಿಯವರಿಂದ ಪ್ರಶಂಸೆಗೆ ಒಳಗಾಗಿದೆ. ಸುರಾಜ್ಯ – ಗುಡ್ ಗವರ್ನನ್ಸ್ ವೀಲ್ ಆಫ್ ಡೆಮಾಕ್ರಸಿ : ಉತ್ತಮ ಆಡಳಿತದ ಕುರಿತಾದ ಈ ಪುಸ್ತಕವು ಇತ್ತೀಚೆಗೆ ಬಿಡುಗಡೆಗೊಂಡಿದೆ.
