ದೇವದುರ್ಗ : ಚುಟುಕು ಸಾಹಿತ್ಯ ಪರಿಷತ್ತು ದೇವದುರ್ಗ ತಾಲೂಕು ಘಟಕ ರಾಯಚೂರು ಜಿಲ್ಲಾ ಇದರ ವತಿಯಿಂದ ದೇವದುರ್ಗ ತಾಲೂಕು ಎರಡನೇ ಚುಟುಕು ಸಾಹಿತ್ಯ ಸಮ್ಮೇಳನವನ್ನು ದಿನಾಂಕ 14 ಫೆಬ್ರವರಿ 2026ರಂದು ದೇವದುರ್ಗ ಹೊಸ ಬಸ್ ನಿಲ್ದಾಣ ಹತ್ತಿರ ಇರುವ ಶ್ರೀ ಮುರಿಗೆಪ್ಪ ಸಾಹು ಖೇಣೇದ್ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ಮುಂಜಾನೆ 7-30 ಗಂಟೆಗೆ ಧ್ವಜಾರೋಹಣ, 8-00 ಗಂಟೆಗೆ ಕನ್ನಡ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ಮತ್ತು 10-00 ಗಂಟೆಗೆ ಚುಟುಕು ಯುಗಾಚಾರ್ಯ ಸನ್ಮಾನ್ಯ ಡಾ. ಎಂ.ಜಿ.ಆರ್. ಅರಸ್ ಇವರು ಚುಟುಕು ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ‘ಭಾವದೀಟಿಯ ಬೆಳ್ಳಿಚುಕ್ಕಿಗಳು’ ಭೀಮೋಜಿರಾವ್ ಜಗತಾಪ ಇವರ ಹನಿಗವನ ಸಂಕಲನ, ‘ಚುಟುಕು ಕುಟುಕು’ ಸ್ಮರಣ ಸಂಚಿಕೆ, ‘ಅರಸು ಚುಟುಕು ಚಿತ್ತಾರಗಳು’ ಸೀತಾಲಕ್ಷ್ಮಿ ವರ್ಮರವರ ಕೃತಿ ಮತ್ತು ‘ಚುಟುಕು ಚಮತ್ಕಾರ’ ಶಿವರಾಯ ಅಕ್ಕರಕಿ ಇವರ ಚುಟುಕು ಸಂಕಲನ ಬಿಡುಗಡೆಗೊಳ್ಳಲಿದೆ. ಮಧ್ಯಾಹ್ನ 1-00 ಗಂಟೆಗೆ ಚುಟುಕು ಸಾಹಿತ್ಯ ಸಂಕೀರ್ಣ ಗೋಷ್ಠಿ -01ನ್ನು ಶ್ರೀದೇವಿ ರಾಜಶೇಖರ ನಾಯಕ ಇವರು ಉದ್ಘಾಟನೆ ಮಾಡಲಿದ್ದು, ಶ್ರೀಮತಿ ಇಂದಿರಾ ಆರ್. ಇವರು ಉದ್ಘಾಟನೆ ಮಾಡಲಿದ್ದಾರೆ. ಸಾಹಿತಿ ಭೀಮೋಜಿರಾವ್ ಜಗತಾಪ ಇವರು ‘ಸಮಕಾಲೀನ ಸಾಹಿತ್ಯ ಸ್ಪರ್ಧೆಯಲ್ಲಿ ಚುಟುಕು ಸಾಹಿತ್ಯಕ್ಕಿರುವ ಹಿರಿಮೆ ಗರಿಮೆ’, ಸಹ ಪ್ರಾಧ್ಯಾಪಕರಾದ ಡಾ. ಸುಭಾಶ್ಚಂದ್ರ ಪಾಟೀಲ್ ಇವರು ‘ಸಾಮಾಜಿಕ ಸ್ವಾಸ್ತ್ಯ, ಕಾಪಾಡುವಲ್ಲಿ ಚುಟುಕು ಸಾಹಿತ್ಯ’ ಮತ್ತು ವಕೀಲ ಬಸನಗೌಡ ದೇಸಾಯಿ ಕಕ್ಕಲದೊಡ್ಡಿ ಇವರು ‘ನೀರಾವರಿ ಲಭ್ಯತೆ ಮತ್ತು ಸಮಸ್ಯೆಗಳು’ ಎಂಬ ವಿಷಯದ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ. 2-15 ಗಂಟೆಗೆ ಸಾಹಿತಿ ಮುನಿಯಪ್ಪ ನಾಗೋಲಿ ಇವರ ಅಧ್ಯಕ್ಷತೆಯಲ್ಲಿ ‘ಚುಟುಕು ಕವಿಗೋಷ್ಠಿ’ ನಡೆಯಲಿದೆ. 3-30 ಗಂಟೆಗೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, 4-15ಕ್ಕೆ ಬಹಿರಂಗ ಅಧಿವೇಶನ, 4-30ಕ್ಕೆ ಸನ್ಮಾನ ಸಮಾರಂಭ, ಚುಟುಕು ಗೌರವ ಸನ್ಮಾನ, 5-15 ಗಂಟೆಗೆ ಸಮಾರೋಪ ಸಮಾರಂಭ, 7-30ಕ್ಕೆ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

