ಸಾಗರ : ವಿಜಯ ಸೇವಾ ಟ್ರಸ್ಟ್ (ರಿ.) ಮತ್ತು ಯಕ್ಷಶ್ರೀ ಸಾಗರ ಇವರ ಸಂಯುಕ್ತ ಆಶ್ರಯದಲ್ಲಿ ‘ಧಾರೇಶ್ವರರ ನೆನಪು’ ಯಕ್ಷ ಮಾಂತ್ರಿಕ ಸುಬ್ರಹ್ಮಣ್ಯ ಧಾರೇಶ್ವರರ ನೆನಪಿನಲ್ಲಿ ವಿಶಿಷ್ಟ ಯಕ್ಷಗಾನ ಹಿಮ್ಮೇಳ ಕಾರ್ಯಕ್ರಮವನ್ನು ದಿನಾಂಕ 12 ಅಕ್ಟೋಬರ್ 2025ರಂದು ಸಂಜೆ 5-00 ಗಂಟೆಗೆ ಸಾಗರ ಬಿ.ಹೆಚ್. ರಸ್ತೆ, ಐ.ಬಿ. ಮುಂಭಾಗದಲ್ಲಿರುವ ಕುಡುಪಲಿ ಸದಾನಂದ ಸ್ವರಲಾಯದಲ್ಲಿ ಆಯೋಜಿಸಲಾಗಿದೆ.
ಗೋಪಾಲಕೃಷ್ಣ ಭಟ್ ಜೋಗಿಮನೆ, ಸೃಜನ್ ಗಣೇಶ ಹೆಗಡೆ, ಶಂಕರ ಭಾಗವತರು, ಶರತ್ ಜಾನಕೈ, ಕಾರ್ತೀಕ್ ಧಾರೇಶ್ವರ ಮುಂತಾದ ಕಲಾವಿದರು ಭಾಗವಹಿಸಲಿದ್ದು, ಮದ್ದಳೆ ಮೋಡಿಗಾರ ಶಂಕರ ಭಾಗವತರಿಗೆ ಯಕ್ಷಶ್ರೀ ರಜತ ಸಂಭ್ರಮದ ವಿಶೇಷ ಗೌರವಾರ್ಪಣೆ ನೀಡಲಾಗುವುದು.