ಪುತ್ತೂರು : ನಾಟ್ಯರಂಗ ಪ್ರಸ್ತುತ ಪಡಿಸುವ ಕಾಮಧೇನುವಿಗೆ ನೃತ್ಯದ ಭಾಷ್ಯ ‘ಧರ್ಮಧೇನು’ ನೃತ್ಯ ರೂಪಕವು ಮೊಟ್ಟೆತಡ್ಕ ಎನ್.ಆರ್.ಸಿ.ಸಿ. ಬಳಿ ಕುರಿಯ ಗ್ರಾಮದ ಶ್ರೀ ದೇವಳದ ಗೋವಿಹಾರ ಧಾಮದಲ್ಲಿ ದಿನಾಂಕ 04-02-2024ರಂದು ನಡೆಯಲಿದೆ. ಈ ಕಾರ್ಯಕ್ರಮವು ಪುತ್ತೂರಿನ ಶ್ರೀ ಮಹಾತೋಭಾರ ಮಹಾಲಿಂಗೇಶ್ವರ ದೇವಸ್ಥಾನ ಆಯೋಜಿಸುವ ಗೊಲೋಕೋತ್ಸವದಲ್ಲಿ ಪ್ರಸುತ್ತಗೊಳ್ಳಲಿದೆ.
ನೃತ್ಯ ರೂಪಕದ ರಚನೆ ಕವಿತಾ ಅಡೂರು ಮಾಡಿದ್ದು, ಸಂಗೀತ ಧನ್ಯತಾ ವಿನಯ್ ಹಾಗೂ ವಿದುಷಿ ಮಂಜುಳಾ ಸುಬ್ರಹ್ಮಣ್ಯ ನಿರ್ದೇಶನ ಮಾಡಿದ್ದಾರೆ. ನಟುವಾಂಗದಲ್ಲಿ ಪುತ್ತೂರಿನ ವಿದ್ವಾನ್ ಮಂಜುನಾಥ್ ಮತ್ತು ಸಾತ್ವಿಕ್ ಬೆಡೇಕರ್ ಹಾಡುಗಾರಿಕೆಗೆ ಬೆಂಗಳೂರಿನ ಪವನಮಾಧವ್ ಮಸೂರು ಮೃದಂಗದಲ್ಲಿ, ಪುತ್ತೂರಿನ ಕೃಷ್ಣಗೋಪಾಲ ಕೊಳಲಿನಲ್ಲಿ ಹಾಗೂ ಪ್ರಮಥೇಶ್ ಕೀಬೋರ್ಡ್ ಸಾಥ್ ನೀಡಲಿದ್ದಾರೆ.