Subscribe to Updates

    Get the latest creative news from FooBar about art, design and business.

    What's Hot

    ಪರಿಚಯ ಲೇಖನ | ಯಕ್ಷರಂಗದ ಕ್ರಿಯಾಶೀಲ ಪ್ರತಿಭೆ – ಸುಜನ್ ಕುಮಾರ್ ಅಳಿಕೆ

    May 25, 2025

    ವಿಶೇಷ ಲೇಖನ | ಸುಗಮ ಸಂಗೀತದ ಸರದಾರ ‘ಯಶವಂತ ಹಳಿಬಂಡಿ’

    May 25, 2025

    ಶ್ರೀ ಕ್ಷೇತ್ರ ಪಂಚಲಿಂಗದಲ್ಲಿ ಕಿರು ನಾಟಕ, ನೃತ್ಯ ನಮನ ಮತ್ತು ಯಕ್ಷಗಾನ ಪ್ರದರ್ಶನ | ಮೇ 25 ಮತ್ತು 26

    May 24, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಧಾರವಾಡ ಆರ್ಟ್ ಗ್ಯಾಲರಿಯಲ್ಲಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ, ಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಗ್ರಂಥ ಬಿಡುಗಡೆ
    Visual Arts

    ಧಾರವಾಡ ಆರ್ಟ್ ಗ್ಯಾಲರಿಯಲ್ಲಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ, ಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಗ್ರಂಥ ಬಿಡುಗಡೆ

    August 3, 2023Updated:August 19, 2023No Comments4 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಧಾರವಾಡ : ರಾಷ್ಟ್ರೀಯ ದೃಶ್ಯಕಲಾ ಅಕಾಡೆಮಿ ವತಿಯಿಂದ ಪ್ರೊ. ಎಸ್.ಸಿ. ಪಾಟೀಲರ 68ನೇ ಜನ್ಮದಿನ ಸಂಭ್ರಮದ ಅಂಗವಾಗಿ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ದಿನಾಂಕ 23-07-2023ರಂದು ಆಯೋಜಿಸಿದ್ದ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ, ಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಗ್ರಂಥ ಬಿಡುಗಡೆಯ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಿತು.

    ಈ ಸಮಾರಂಭದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಹಿರಿಯ ಸಂಶೋಧನಾಧಿಕಾರಿ ಡಾ. ಕೆ. ಪ್ರೇಮಕುಮಾರ್ ಮಾತನಾಡುತ್ತಾ “ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಲಲಿತಕಲಾ ವಿಶ್ವವಿದ್ಯಾಲಯದ ಅವಶ್ಯಕತೆ ಇದೆ. ಸರ್ಕಾರ ಆದಷ್ಟು ಬೇಗ ಈ ವಿಶ್ವವಿದ್ಯಾಲಯ ಸ್ಥಾಪನೆ ಮಾಡಬೇಕು. ಈಗಾಗಲೇ ವಿಶ್ವವಿದ್ಯಾಲಯ ಈ ನಿಟ್ಟಿನಲ್ಲಿ ವಿಶೇಷಾಧಿಕಾರಿಯ ನೇಮಕ ಮಾಡಲಾಗಿದೆ. ಬಾದಾಮಿಯಲ್ಲಿ 430 ಎಕರೆ ಜಾಗ ಗುರುತಿಸಲಾಗಿದೆ. ವಿಶ್ವವಿದ್ಯಾಲಯದ ಕರಡು ಅಧಿನಿಯಮವನ್ನು ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅನುಷ್ಠಾನ ಮಾತ್ರ ಬಾಕಿ ಇದೆ. ಸರ್ಕಾರ ಆ ಕೆಲಸವನ್ನು ಕೂಡಲೇ ಮಾಡಬೇಕು” ಎಂದು ಆಗ್ರಹಿಸಿದರು.

    ಡಾ.ಪ್ರೇಮಾನಂದ ಲಕ್ಕಣ್ಣವರ ರಚಿಸಿದ ‘ಕರ್ನಾಟಕದ ಚಿತ್ರಕಲಾ ಸಾಹಿತ್ಯ: ಒಂದು ವೈಚಾರಿಕ ಅಧ್ಯಯನ’ ಎಂಬ ಗ್ರಂಥವನ್ನು ಕರ್ನಾಟಕ ವಿಶ್ವವಿದ್ಯಾಲಯದ ಡಾ. ಚಂದ್ರಶೇಖರ ರೊಟ್ಟಿಗವಾಡ ಹಾಗೂ ಪ್ರೊ. ಎಸ್.ಪಾಟೀಲ ರಚಿಸಿದ ‘ವಚನಕಾರ ಹ೦ಡೆ ಚಂದಿಮರಸನ ಶಾಸನಗಳು’ ಗ್ರಂಥವನ್ನು ಕರ್ನಾಟಕ ವಿಶ್ವವಿದ್ಯಾಲಯದ ಪ್ರೊ. ಎಸ್.ಬಿ. ಹಿರೇಮಠ ಇವರುಗಳು ಬಿಡುಗಡೆ ಮಾಡಿದರು.

    ಶ್ರೀ ಎನ್.ಎಂ.ದಾಟನಾಳ, ಶ್ರೀ ಸಿ.ಜಿ. ಪಾಟೀಲ್ ಹಾಗೂ ಶ್ರೀ ಜೆ.ವಿ.ಕಮ್ಮಾರ ಅವರಿಗೆ ಚಿತ್ರಕಲಾ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗದಗಿನ ಡಾ. ಬಿ.ಎಲ್. ಚವ್ಹಾಣ ಅವರ ‘ಗದಗ ಜಿಲ್ಲೆಯ ದೃಶ್ಯಕಲಾನ್ವೇಷಕರು, ಬದಾಮಿ ಡಾ. ಎನ್.ಎಂ. ಅಂಗಡಿ ಅವರ ‘ರಸಾನುಭವ’ ಹಾಗೂ ದಾವಣಗೆರೆ ಡಾ. ಜೈರಾಜ ಚಿಕ್ಕಪಾಟೀಲ ಅವರ ‘ಅನ್ವಯಿಕ ಕಲೆ ಅಯಾಮಗಳು’ ಕೃತಿಗಳಿಗೆ ದೃಶ್ಯಕಲಾ ಶ್ರೇಷ್ಠ ಕೃತಿ ಪುರಸ್ಕಾರ ನೀಡಲಾಯಿತು. 2023ನೇ ಸಾಲಿನ ಕೇಂದ್ರ ಲಲಿತಕಲಾ ಅಕಾಡೆಮಿ ಪ್ರಶಸ್ತಿ ವಿಜೇತ ಕಿರಣಕುಮಾರ್ ಶೇರಖಾನ ಅವರನ್ನು ಗೌರವಿಸಲಾಯಿತು.

    ರೋಟರಿ ಕ್ಲಬ್‌ ನ ಅಧ್ಯಕ್ಷ ಪ್ರೊ. ಎಸ್. ಟಿ. ನಂದಿಬೇವೂರ, ಪ್ರೊ. ಎಸ್‌.ಸಿ.ಪಾಟೀಲ, ಡಾ.ಬಸವರಾಜ ಗವಿಮಠ, ಡಾ. ಬಿ.ಎಂ.ಪಾಟೀಲ, ಡಾ.ಬಸವರಾಜ ಕುರಿಯವರ, ಡಾ.ಶಂಕರ ಕುಂದಗೋಳ, ಬಿ.ಎಸ್‌.ಬಿ. ಗೌಡರ್, ಡಾ. ಬಸವರಾಜ ಅನಗವಾಡಿ ಇದ್ದರು.

    ಡಾ. ಎಸ್. ಸಿ. ಪಾಟೀಲ
    ಬಹುಮುಖ ವ್ಯಕ್ತಿತ್ವದ ಡಾ. ಎಸ್. ಸಿ. ಪಾಟೀಲರವರು ವೃತ್ತಿಯಿಂದ ಪ್ರಾಧ್ಯಾಪಕರು. ಆದರೆ ಪ್ರವೃತ್ತಿಯಿಂದ ಸಂಶೋಧಕರು ಮತ್ತು ಚಿತ್ರಕಲಾವಿದರೂ ಆಗಿದ್ದಾರೆ. ಇವರ ಸಂಶೋಧನೆಯ ಕ್ಷೇತ್ರಗಳು ಸಾಹಿತ್ಯ, ಇತಿಹಾಸ, ಲಲಿತಕಲೆಗಳು, ಶಿಕ್ಷಣ, ಜಾನಪದ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮ ಸಂಶೋಧನಾಸಕ್ತಿಯನ್ನು ಬೆಳೆಸಿಕೊಂಡಿದ್ದಾರೆ. ಇವರು 23ನೇ ಜುಲೈ 1955ರಲ್ಲಿ, ಗುಲ್ಬಬರ್ಗ ಜಿಲ್ಲೆಯ ಜೇವರ್ಗಿ ತಾಲೂಕಿನ ಮಾಣಶಿವಣಗಿಯಲ್ಲಿ ಜನಿಸಿದರು. ತಮ್ಮ ಪ್ರಾಥಮಿಕ-ಮಾಧ್ಯಮಿಕ ವಿದ್ಯಾಭ್ಯಾಸವನ್ನು ಸಿಂದಗಿಯಲ್ಲಿ ಮುಗಿಸಿದ ಬಳಿಕ ಅವರು ಉನ್ನತ ಪದವಿಯನ್ನು ಕರ್ನಾಟಕ ಮಹಾವಿದ್ಯಾಲಯದಲ್ಲಿ ಹಾಗೂ ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಕರ್ನಾಟಕ ವಿಶ್ವವಿದ್ಯಾಲಯದ ಧಾರವಾಡದಲ್ಲಿ ಪೂರೈಸಿದರು.

    ಮೊಟ್ಟಮೊದಲು ಕರ್ನಾಟಕದಲ್ಲಿ ಚಿತ್ರಕಲೆಗೆ ಸಂಬಂಧಿಸಿದಂತೆ ‘ಕರ್ನಾಟಕದ ಜನಪದ ಚಿತ್ರಕಲೆ’ ಎಂಬ ಸಂಶೋಧನಾ ಮಹಾಪ್ರಬಂಧವನ್ನು ಸಲ್ಲಿಸಿ ಕರ್ನಾಟಕ ವಿಶ್ವವಿದ್ಯಾಲಯದಿಂದ 1991ರಲ್ಲಿ ಪಿಹೆಚ್.ಡಿ ಪದವಿಯನ್ನು ಪಡೆದಿದ್ದಾರೆ. ಇದಲ್ಲದೇ ಇವರು ‘ಎ ಕ್ರಿಟಿಕಲ್ ಅನಲೈಸಿಸ್ ಆಫ್ ಆರ್ಟ್ ಎಜುಕೇಷನ್ ಇನ್ ಕರ್ನಾಟಕ ಸ್ಟೇಟ್ ವಿತ್ ಸ್ಪೆಶಲ್ ರೆಫರೆನ್ಸ್ ಟು ಡ್ರಾಯಿಂಗ್ ಅಂಡ್ ಪೈಂಟಿಂಗ್ ಆಟ್ ಸ್ಕೂಲ್ ಲೆವೆಲ್’ ಎಂಬ ಮಹಾಪ್ರಬಂಧವನ್ನು ಸಲ್ಲಿಸಿ ಎರಡನೆಯ ಪಿಹೆಚ್.ಡಿ ಪದವಿಯನ್ನು ಪಡೆದಿದ್ದು, ಲಲಿತಕಲಾ ಕ್ಷೇತ್ರದಲ್ಲಿ ರಾಷ್ಟçದಲ್ಲಿಯೇ ಎರಡು ಪಿಹೆಚ್.ಡಿ ಪಡೆದಿರುವ ಮೊದಲಿಗರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ತಮ್ಮ ವಿದ್ಯಾಭ್ಯಾಸದೊಂದಿಗೆ ಹಾರೋಗೇರಿ ಮತ್ತು ಉಪ್ಪಿನಬೆಟಗೇರಿಯ ಪದವಿ ಪೂರ್ವ ಮಹಾವಿದ್ಯಾಲಯಗಳಲ್ಲಿ ಹಾಗೂ ಬೈಲಹೊಂಗಲ, ಧಾರವಾಡದ ಶಿಕ್ಷಣ ಮಹಾವಿದ್ಯಾಲಯದಲ್ಲಿ 13 ವರ್ಷ ಸುದೀರ್ಘ ಸೇವೆ ಸಲ್ಲಿಸಿ, 1997ರಲ್ಲಿ ಕನ್ನಡ ವಿಶ್ವವಿದ್ಯಾಲಯ, ಹಂಪಿಯ ದೃಶ್ಯಕಲಾ ವಿಭಾಗದ ರೀಡರ್ ಆಗಿ ನೇಮಕಾತಿ ಹೊಂದಿ ಮುಂದೆ ಪ್ರಾಧ್ಯಾಪಕರಾಗಿ ಬಡ್ತಿ ಹೊಂದಿದ್ದಾರೆ. ಹಾಗೆಯೇ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಇವರ ಚಿತ್ರ ಕಲಾಕೃತಿಗಳು ಪ್ರದರ್ಶನಗೊಂಡಿವೆ.

    ಕನ್ನಡ ವಿಶ್ವವಿದ್ಯಾಲಯ, ಹಂಪಿಯಲ್ಲಿನ ದೃಶ್ಯಕಲಾ ವಿಭಾಗ, ಸಂಗೀತ ಮತ್ತು ನೃತ್ಯ ವಿಭಾಗ, ಬಾದಾಮಿಯ ಶಿಲ್ಪ ಮತ್ತು ವರ್ಣಚಿತ್ರಕಲಾ ವಿಭಾಗ, ಹಂಪಿಯಲ್ಲಿ ಕರ್ನಾಟಕ ಚಿತ್ರಕಲಾ ಮಹಾವಿದ್ಯಾಲಯಗಳ ನಿರ್ವಹಣಾ ಕೇಂದ್ರದ ಮುಖ್ಯಸ್ಥರಾಗಿ, ಆರು ವರ್ಷಗಳ ಅವಧಿಗೆ ಡೀನ್‌ ಆಗಿ, ಸಿಂಡಿಕೇಟ್ ಸದಸ್ಯರಾಗಿ, ವಿಶ್ವವಿದ್ಯಾಲಯದ ಎಲ್ಲ ಪ್ರಮುಖ ಸಮಿತಿಗಳಲ್ಲಿ ಸದಸ್ಯರಾಗಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಯು.ಜಿ.ಸಿ. ನೆಟ್ ಮೌಲ್ಯಮಾಪನ ರಾಷ್ಟ್ರೀಯ ಸಮಿತಿಯ ಸದಸ್ಯರಾಗಿ ಕಳೆದ ಹತ್ತು ವರ್ಷಗಳಿಂದ ಸೇವೆ ಸಲ್ಲಿಸಿರುವುದು ಮಾತ್ರವಲ್ಲದೆ ಯು.ಜಿ.ಸಿ. ನ್ಯಾಕ್ ಕಮಿಟಿಯ ಸದಸ್ಯರಾಗಿ ಹಲವಾರು ವಿಶ್ವವಿದ್ಯಾಲಯಗಳನ್ನು ಸಂದರ್ಶಿಸಿದ್ದಾರೆ.

    ಕನ್ನಡ ವಿಶ್ವವಿದ್ಯಾಲಯದಲ್ಲಿ ಇವರು ಚಿತ್ರಕಲಾ ಕ್ಷೇತ್ರಕ್ಕೆ ಮೌಲಿಕ ಕೊಡುಗೆಯನ್ನು ನೀಡಿದ್ದಾರೆ. ಎಸ್.ಎಸ್.ಎಲ್.ಸಿ. ಬೋರ್ಡಿನಲ್ಲಿದ್ದ ಕಲಾಶಾಲೆಗಳನ್ನು ವಿಶ್ವವಿದ್ಯಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸಲು ಮತ್ತು ಉನ್ನತ ಪದವಿ ಶಿಕ್ಷಣವನ್ನು ಪಡೆಯಲು ಇವರು ವಹಿಸಿದ ಪಾತ್ರ ಅವಿಸ್ಮರಣೀಯವಾಗಿದೆ. ಬಾದಾಮಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ಕೇಂದ್ರವನ್ನು ಕಟ್ಟಿ ಬೆಳೆಸಿದ್ದಾರೆ. ಅಲ್ಲದೇ ಈಗ ಅದು ಸ್ವತಂತ್ರ ಲಲಿತಕಲಾ ವಿಶ್ವವಿದ್ಯಾಲಯವಾಗಲು ಇವರು ನಡೆಸಿದ ಪ್ರಯತ್ನ ಅಮೋಘವಾದುದಾಗಿದೆ. ಸದ್ಯದಲ್ಲಿ ಲಲಿತಕಲಾ ವಿಶ್ವವಿದ್ಯಾಲಯ ಬಾದಾಮಿಯಲ್ಲಿ ಸ್ಥಾಪನೆಗೊಳ್ಳಲು ಸಿದ್ಧತೆಗಳು ನಡೆದಿವೆ. ಇದರ ಕೀರ್ತಿಯು ಡಾ. ಎಸ್. ಸಿ. ಪಾಟೀಲರಿಗೆ ಸಲ್ಲುತ್ತದೆ. ಇವೆಲ್ಲವು ಆಡಳಿತಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರೆ, 30 ಪಿಹೆಚ್.ಡಿ ಮಹಾಪ್ರಬಂಧ, 45 ಎಂ.ಫಿಲ್ ಸಂಪ್ರಬಂಧ ಹಾಗೂ ನೂರಾರು ಎಂ.ವಿ.ಎ. ಕಿರುಪ್ರಬಂಧಗಳು ಇವರ ಮಾರ್ಗದರ್ಶನದಲ್ಲಿ ರಚನೆಯಾಗಿವೆ. ಅನೇಕ ವಿದ್ಯಾರ್ಥಿಗಳು ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಈಗಲೂ ಹಲವಾರು ವಿದ್ಯಾರ್ಥಿಗಳು ಸಂಶೋಧನಾಧ್ಯಯನದಲ್ಲಿ ನಿರತರಾಗಿದ್ದಾರೆ.

    ಇವರ ಪ್ರಮುಖ ಕ್ಷೇತ್ರವೆಂದರೆ ಲಲಿತಕಲೆ. ಕರ್ನಾಟಕ, ಭಾರತೀಯ ಹಾಗೂ ಪಾಶ್ಚಿಮಾತ್ಯ ಕಲೆಗಳನ್ನು ಕುರಿತಂತೆ ಪ್ರಮುಖ ಕೃತಿಗಳನ್ನು ಹೊರತಂದಿದ್ದಾರೆ. ಹಂಡೆವಜೀರ ಅರಸರ ಮತ್ತು ಸಮುದಾಯದ ಕುರಿತು ಇವರು ಕಳೆದ 25 ವರ್ಷಗಳಿಂದ ಸಂಶೋಧನೆಗಳನ್ನು ನಡೆಸಿ ಈ ಕ್ಷೇತ್ರಕ್ಕೆ ಹೊಸ ಬೆಳಕನ್ನು ಚೆಲ್ಲಿದ್ದಾರೆ. ಹಂಡೆ ಅರಸರು ಬಾದಾಮಿ ಚಾಲುಕ್ಯರ ವಂಶಸ್ಥರು ಮತ್ತು ಕಲ್ಯಾಣ ಚಾಲುಕ್ಯರ ಸಂಬಂಧಿಗಳು ಎಂಬ ಹೊಸ ಶೋಧವನ್ನು ನಾಡಿಗೆ ನೀಡಿರುವುದು ಇವರ ಬಹುದೊಡ್ಡ ಕೊಡುಗೆ ಈ ವಿಷಯ ರಾಷ್ಟ್ರದುದ್ದಕ್ಕೂ ಚರ್ಚೆಯಾಗಿದೆ.

    ಇವರ ಪ್ರಮುಖ ಕೃತಿಗಳು :
    ಕರ್ನಾಟಕದ ಜನಪದ ಚಿತ್ರಕಲೆ, ಬಾರೋಕ್ ಕಲೆ, ರಂಗೋಲಿ ಚಿತ್ರಕಲೆ, ಹಚ್ಚೆ ಚಿತ್ರಕಲೆ, ನಾಡೋಜ ವಿ.ಟಿ. ಕಾಳೆ, ವರ್ಣ ಸಂಚಯ, ಚಿತ್ರಕಲೆ ಮತ್ತು ಪೂರಕಕ್ಷೇತ್ರಗಳು, ಚಿತ್ರಾಕ್ಷಿ, ಕರ್ನಾಟಕದ ಚಿತ್ರಕಲಾ ವಿವರಣಾತ್ಮಕ ಗ್ರಂಥಸೂಚಿ, ಹೈದ್ರಾಬಾದ್-ಕರ್ನಾಟಕದ ಲಲಿತಕಲೆಗಳ ವಿಶ್ವಕೋಶ, ದೃಶ್ಯಕಲಾ ಪಾರಿಭಾಷಿಕ ವಿಷಯ ವಿಶ್ವಕೋಶ, ನಿಜದನೆಲೆ, ಬುಕ್ಕರಾಯ ಚರಿತ್ರೆ, ಬುಜರಕಂಚನಹಳ್ಳಿಯ ಭಿತ್ತಿಚಿತ್ರಕಲೆ, ಹಸೆ ಚಿತ್ರಕಲೆಯ ಆಶಯ ಮತ್ತು ಅಭಿವ್ಯಕ್ತಿ, ಶಾಸನೋಕ್ತ ಹಂಡೆ ಅರಸುಮನೆತನ, ನಿಡುಮಾಮಿಡಿ ಜಗದ್ಗುರು ಪೀಠ ಪರಂಪರೆ, ಹಂಡೆ ಅರಸರ ಕುರಿತ ಕೈಫಿಯತ್ತುಗಳು, ಕರ್ನಾಟಕದ ಗಡಿಗೆರೆಗಳು, ಹಂಡೆ ಅರಸ ಇತಿಹಾಸ ಮತ್ತು ಪರಂಪರೆ, ಚಂದಿಮರಸನ ವಚನಗಳ ಭಾವಾನುವಾದ ಹೀಗೆ ಮುಂತಾದ 45ಕ್ಕೂ ಹೆಚ್ಚು ಮೌಲಿಕ ಗ್ರಂಥಗಳು ಹೊರಬಂದಿವೆ. ಇದಲ್ಲದೇ 150ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ವಿಚಾರಸಂಕಿರಣ, ಸಮ್ಮೇಳನಗಳಲ್ಲಿ ಮಂಡಿಸಿ ವಿದ್ವತ್ ಪ್ರಪಂಚದ ಗಮನವನ್ನು ಸೆಳೆದಿದ್ದಾರೆ. ಇವರು ನೇಪಾಳ, ಚೀನಾ ಮುಂತಾದ ದೇಶಗಳ ಶೈಕ್ಷಣಿಕ ಸಂದರ್ಶಕರಾಗಿ ಹೋಗಿ ವಿಶೇಷ ಅನುಭವವನ್ನು ಪಡೆದವರು.

    ಪ್ರಶಸ್ತಿಗಳು
    ಇವರ ನಾಲ್ಕು ಗ್ರಂಥಗಳಿಗೆ ವಿವಿಧ ರಾಜ್ಯ ಮಟ್ಟದ ಪ್ರಶಸ್ತಿಗಳು ಬಂದಿವೆ. ಕರ್ನಾಟಕ ರಾಜ್ಯ ಲಲಿತಕಲಾ ಅಕಾಡೆಮಿಯ ಹಿರಿಯ ಕಲಾವಿದ ಗೌರವ ಪ್ರಶಸ್ತಿ, ಕು.ಶಿ. ಹರಿದಾಸ ಭಟ್ ಜಾನಪದ ಪ್ರಶಸ್ತಿ, ಕಾಸರಗೋಡಿನ ಗಡಿನಾಡ ರಾಷ್ಟ್ರೀಯ ಕಲಾವಿದ ಪ್ರಶಸ್ತಿ, ಮೈಸೂರಿನ ಶಿವಕಲಾ ಪ್ರಶಸ್ತಿ, ನವ ದೆಹಲಿಯ ಶಿಕ್ಷಣ ರತ್ನ ಪ್ರಶಸ್ತಿ, ಉಡುಪಿಯ ಉಪಾಧ್ಯಾಯ ಸಮ್ಮಾನ ಪ್ರಶಸ್ತಿ, ಕನ್ನಡ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯಮಟ್ಟದ ಶ್ರೇಷ್ಠ ಉಪನ್ಯಾಸಕ ಪ್ರಶಸ್ತಿ, ಪ್ರಸ್ತುತ ವರ್ಷದಲ್ಲಿ ಚಾಲುಕ್ಯ ಸಂಸ್ಕೃತಿ ಅಧ್ಯಯನ ಪೀಠದ ರಾಷ್ಟ್ರೀಯ ‘ಹಂಡೆಶ್ರೀ’ ಪ್ರಶಸ್ತಿ ಮತ್ತು ಪ್ರಿ. ಬಸವರಾಜ ಗವಿಮಠ 50ನೇ ವರ್ಷದ ಅಭಿನಂದನಾ ಸಮಾರಂಭದ ‘ಸಾಧಕ ಸಂಶೋಧನಾ’ ಪ್ರಶಸ್ತಿಗಳು ಸಾಹಿತ್ಯ ಕ್ಷೇತ್ರದಲ್ಲಿ ಇವರು ಮಾಡಿದ ಸೇವೆಗೆ ಸಂದ ಗೌರವ. ಇವರ ಪಿಹೆಚ್.ಡಿ ಮಹಾಪ್ರಬಂಧಕ್ಕೆ ಚಿನ್ನದ ಪದಕ, ಅಲ್ಲದೆ ಅನೇಕ ಪದವಿ ಪರೀಕ್ಷೆಗಳಲ್ಲಿ ರ್ಯಾಂ ಕುಗಳನ್ನು ಪಡೆದ ಹಿರಿಮೆ ಇವರದಾಗಿದೆ.

    30 ವರ್ಷಗಳ ಬೋಧನಾನುಭವ ಹೊಂದಿದ ಇವರು ಪ್ರಸ್ತುತ 60ನೆಯ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇದೀಗ ಇವರು ನಿಯೋಜಿತ ಲಲಿತಕಲಾ ವಿಶ್ವವಿದ್ಯಾಲಯದ ವಿಶೇಷಾಧಿಕಾರಿಗಳಾಗಿ, ಆ ವಿಶ್ವವಿದ್ಯಾಲಯಕ್ಕೆ ಬೇಕಾದ ಎಲ್ಲ ರೂಪುರೇಷಗಳ ವರದಿ ಮತ್ತು ವಿಶ್ವವಿದ್ಯಾಲಯದ ಆ್ಯಕ್ಟನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಈ ವಿಶ್ವವಿದ್ಯಾಲಯದ ಪ್ರಾದೇಶಿಕ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗೆಯೇ ಮುಂಬರುವ ಲಲಿತಕಲಾ ವಿಶ್ವವಿದ್ಯಾಲಯದ ಕುಲಪತಿಗಳು ಇವರಾಗಲಿ ಎಂದು ಹಾರೈಸುತ್ತೇವೆ.

    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗುರುವಂದನ ಕಾರ್ಯಕ್ರಮ
    Next Article ಮಂಗಳೂರಿನಲ್ಲಿ ಯುವವಾಹಿನಿಯಿಂದ ‘ಬರಹಗಾರರ ಸಮಾಗಮ’
    roovari

    Add Comment Cancel Reply


    Related Posts

    ದೃಶ್ಯಕಲೆ ಪದವಿ ಪ್ರವೇಶಕ್ಕೆ ಅರ್ಜಿ ಆಹ್ವಾನ

    April 29, 2025

    ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ‘ಸಮರ್ಪಣಂ ಕಲೋತ್ಸವ 2025’ | ಏಪ್ರಿಲ್ 03

    March 27, 2025

    ಕಾಸರಗೋಡು ಕನ್ನಡ ಗ್ರಾಮದ ಸಾಂಸ್ಕೃತಿಕ ಭವನದಲ್ಲಿ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಯೋಜನೆಗೆ ಆಹ್ವಾನ

    February 10, 2025

    30ನೇ ವರ್ಷದ ಆಳ್ವಾಸ್ ವಿರಾಸತ್‌ಗೆ ಅದ್ಧೂರಿಯ ಚಾಲನೆ, ಮೇಳೈಸಿದ ವೈಭವ

    December 11, 2024

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.