ಉಡುಪಿ : ಕರ್ನಾಟಕ ಯಕ್ಷಗಾನ ಅಕಾಡೆಮಿ, ಸುಮನಸಾ ಕೊಡವೂರು, ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಆಶ್ರಯದಲ್ಲಿ ಕೊಡವೂರು ಶಂಕರನಾರಾಯಣ ದೇವಸ್ಥಾನದ ಸಹಯೋಗದೊಂದಿಗೆ ಕೊಡವೂರಿನಲ್ಲಿ ದಿನಾಂಕ 03 ಆಗಸ್ಟ್ 2025ರಂದು ‘ಧೀಂಕಿಟ ಯಕ್ಷಗಾನ ಹೆಜ್ಜೆ’ ತರಬೇತಿ ಶಿಬಿರದ ಉದ್ಘಾಟನೆ ನಡೆಯಿತು.
ಕರ್ನಾಟಕ ಸರಕಾರದ ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಇವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿ “ಯಕ್ಷಗಾನ ಕೇವಲ ಕಲೆಯಷ್ಟೇ ಅಲ್ಲಾ, ಅದು ನಮ್ಮ ಸಂಸ್ಕ್ರತಿಯ ಪ್ರತೀಕ, ಈಗಿನ ಒತ್ತಡದ ಬದುಕಿನ ನಡುವೆ ಸಾಂಸ್ಕೃತಿಕವಾಗಿ ತಮ್ಮನ್ನು ತೊಡಗಿಸಿಕೊಂಡಲ್ಲಿ ಆರೋಗ್ಯಕ್ಕೂ ಉತ್ತಮ” ಎಂದು ಹೇಳಿದರು.
ವೇದಿಕೆಯಲ್ಲಿ ಬ್ರಹ್ಮಬೈದೇರುಗಳ ಗರಡಿ ಕಲ್ಮಾಡಿ ಇದರ ಅಧ್ಯಕ್ಷರಾದ ಶಶಿಧರ್ ವಡಬಾಂಡೇಶ್ವರ, ಯಕ್ಷ ಸಂಜೀವ ಟ್ರಸ್ಟ್ ಬುಡ್ನಾರು ಇದರ ಪ್ರವರ್ತಕರಾದ ಗುರು ಬನ್ನಂಜೆ ಸಂಜೀವ ಸುವರ್ಣ, ಸುಮನಸಾ ಅಧ್ಯಕ್ಷರಾದ ಪ್ರಕಾಶ್ ಜಿ. ಕೊಡವೂರು, ಸುಮನಸಾ ಸಂಚಾಲಕರಾದ ಭಾಸ್ಕರ್ ಪಾಲನ್ ಬಾಚನಬೈಲ್, ಶಂಕರನಾರಾಯಣ ದೇವಳದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ರಾಜಾ ಸೇರಿಗಾರ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಯಕ್ಷಗಾನ ಗುರುಗಳಾದ ಮನೋಜ್ ಅವರನ್ನು ಗೌರವಿಸಲಾಯಿತು. ಕುಮಾರಿ ವಿದ್ಯಾದಾಯಿನಿ ಇವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಭೆಯಲ್ಲಿ ಪ್ರಕಾಶ್ ಜಿ. ಕೊಡವೂರು ಸ್ವಾಗತಿಸಿ, ಸ್ವಸ್ತಿ ಪ್ರಶಾಂತ್ ವಂದನಾರ್ಪಣೆಗೈದು, ಚಂದ್ರಕಾಂತ್ ಕಲ್ಮಾಡಿ ಕಾರ್ಯಕ್ರಮ ನಿರೂಪಿಸಿದರು.