ಬಾಗಲಕೋಟೆ : ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನವನಗರ ಬಾಗಲಕೋಟೆ, ನಾಟಕ ವಿಭಾಗ ಕನ್ನಡ ವಿಶ್ವವಿದ್ಯಾಲಯ ಹಂಪಿ ವಿದ್ಯಾರಣ್ಯ, ರಾಷ್ಟ್ರೀಯ ಸಂಶೋಧನಾ ವೇದಿಕೆ (ರಿ.) ಗುಳೇದಗುಡ್ಡ ಇವರ ಸಹಯೋಗದಲ್ಲಿ ‘ಕನ್ನಡ ನಾಟಕಗಳ ವಿಭಿನ್ನ ನೆಲೆಗಳು’ ಒಂದು ದಿನದ ರಾಜ್ಯ ಮಟ್ಟದ ಸಂಶೋಧನಾ ಕಮ್ಮಟವನ್ನು ದಿನಾಂಕ 27 ಮೇ 2025ರಂದು 9-00 ಗಂಟೆಗೆ ಕಾಲೇಜು ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವನ್ನು ಬಾಗಲಕೋಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಅರುಣಕುಮಾರ ಗಾಳಿ ಇವರ ಅಧ್ಯಕ್ಷತೆಯಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿ ಇವರು ಉದ್ಘಾಟನೆ ಮಾಡಲಿದ್ದಾರೆ. ಮುಂಜಾನೆ 10-00 ಗಂಟೆಯಿಂದ ನಡೆಯಲಿರುವ ಗೋಷ್ಠಿ 01ರಲ್ಲಿ ‘ಕುವೆಂಪು ಅವರ ಶೂದ್ರ ತಪಸ್ವಿ ನಾಟಕ’ ಎಂಬ ವಿಷಯದ ಬಗ್ಗೆ ಸಹಾಯಕ ಪ್ರಾಧ್ಯಾಪಕರಾದ ಡಾ. ಸದಾಶಿವ ದೊಡ್ಡಮನಿ, ಗೋಷ್ಠಿ 02ರಲ್ಲಿ ‘ಡಾ. ಚಂದ್ರಶೇಖರ ಕುಂಬಾರ ಅವರ ಶಿವರಾತ್ರಿ ನಾಟಕ’ದ ಬಗ್ಗೆ ಮುಖ್ಯಸ್ಥರಾದ ಡಾ. ರಾಜಶೇಖರ ಬಿರಾದಾರ, ಗೋಷ್ಠಿ 03ರಲ್ಲಿ ‘ಡಾ. ಗಿರೀಶ್ ಕಾರ್ನಾಡ ಅವರ ತಲೆದಂಡ ನಾಟಕ’ದ ಬಗ್ಗೆ ಮುಖ್ಯಸ್ಥರಾದ ಡಾ. ರುದ್ರೇಶ ಮೇಟಿ ವಿಷಯ ಮಂಡನೆ ಮಾಡಲಿರುವರು. 2-30 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.