ಉಡುಪಿ : ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಉಡುಪಿಯ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿ ವಿಶೇಷ ರಿಯಾಯಿತಿ ದರದಲ್ಲಿ ದಿನಾಂಕ 06-11-2023ರಿಂದ 30-11-2023ರವರೆಗೆ ಪುಸ್ತಕ ಮಾರಾಟ ಮಾಡಲಾಗುತ್ತದೆ. ಸಂಸ್ಥೆಯ ಪ್ರಕಟಣೆಗಳಿಗೆ 25% ಯಿಂದ 50% ರವರೆಗೆ ರಿಯಾಯಿತಿ ಕೊಡಲಾಗುವುದು. ಆಸಕ್ತರು ಎಂ.ಜಿ.ಎಂ ಕಾಲೇಜು ಆವರಣದಲ್ಲಿರುವ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿ ಪುಸ್ತಕಗಳನ್ನು ಕೊಂಡುಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ 0820-2521159, 9448868868, 9480575783 ಈ ದೂರವಾಣಿ ಸಂಖ್ಯೆಗಳಿಗೆ ಕರೆಮಾಡಬಹುದು.