ಮಂಗಳೂರು : ಮಂಗಳೂರಿನ ಟಿ. ಎಂ. ಎ. ಪೈ ಇಂಟನ್ಯಾಷನಲ್ ಕನ್ವೆನ್ಶನ್ ಸೆಂಟರ್ ನಲ್ಲಿ ನಡೆದ ಮಂಗಳೂರು ಸಾಹಿತ್ಯ ಉತ್ಸವದ 7ನೇ ಆವೃತ್ತಿಯ ಅಂಗವಾಗಿ ‘ತುಳು ಸಾಹಿತ್ಯ ಆಳ- ಅಗಲ-ಆವಿಷ್ಕಾರಗಳು’ ವಿಷಯದಲ್ಲಿ ಚರ್ಚೆಯು ದಿನಾಂಕ 11 ಜನವರಿ 2025 ರಂದು ಟಿ. ಎಂ. ಎ. ಪೈ ಇಂಟನ್ಯಾಷನಲ್ ಕನ್ವೆನ್ಷನ್ ಸೆಂಟರ್ ಇಲ್ಲಿನ ಹರಟೆ ಕಟ್ಟೆ ನಡೆಯಿತು.
ವಿಚಾರಗೋಷ್ಠಿಯಲ್ಲಿ ಭಾಗವಹಿಸಿದ ಡಾ. ತುಕಾರಾಂ ಪೂಜಾರಿ ಹಾಗೂ ಶಶಿರಾಜ್ ಕಾವೂರು ಮಾತನಾಡಿ “ತುಳು ಭಾಷೆ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಸಾಹಿತ್ಯ ಭಂಡಾರವನ್ನು ಹೊಂದಿದೆ. ಆದರೂ ಬಹುತೇಕ ಸಾಹಿತ್ಯ ಮತ್ತು ವರದಿಗಳು ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ಮಾತ್ರ ಪ್ರಕಟಗೊಳ್ಳುತ್ತಿವೆ. ನಮ್ಮ ತಾಯ್ನುಡಿಯಾದ ತುಳುವಿನಲ್ಲಿ ಸಾಹಿತ್ಯ, ಸಂಶೋಧನೆ, ಮತ್ತು ಪತ್ರಿಕೋದ್ಯಮಕ್ಕೆ ಹೆಚ್ಚಿನ ಒತ್ತಡ ಹಾಕಬೇಕಾಗಿದೆ. ತುಳು ಭಾಷೆಯ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಅದರ ಸಮೃದ್ಧ ಪರಂಪರೆಯನ್ನು ಮುಂದಿನ ಪೀಳಿಗೆಗಳಿಗೆ ಕೊಂಡೊಯ್ಯಲು, ತುಳುವಿನಲ್ಲಿ ಪ್ರಕಟಣೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯವಿದೆ. ತುಳು ಭಾಷೆಯ ಸಂಸ್ಕೃತಿ ಮತ್ತು ಪರಂಪರೆಯನ್ನು ಸಂರಕ್ಷಿಸಲು ಮತ್ತು ಪಸರಿಸಲು ತುಳು ಲಿಪಿಗಳು ಹಾಗೂ ನಾಟಕಗಳು ಮಹತ್ವದ ಪಾತ್ರ ವಹಿಸುತ್ತಿವೆ. ಈ ನಾಟಕಗಳ ಮೂಲಕ ತುಳು ಭಾಷೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ಹೊಸ ಪೀಳಿಗೆಗೂ ಭಾಷೆಯ ಮಹತ್ವವನ್ನು ಅರ್ಥಮಾಡಿಸುವ ಪ್ರಯತ್ನ ನಡೆಯುತ್ತಿದೆ. ತುಳು ಸಾಹಿತ್ಯಕ್ಕೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಪ್ರತ್ಯೇಕತೆ ನೀಡುವ ಅಗತ್ಯವಿದೆ ಹಾಗೂ ಯುವಪೀಳಿಗೆ ತಮ್ಮ ಭಾಷಾ ಪರಂಪರೆಯನ್ನು ಅಪ್ಪಿಕೊಳ್ಳಲು ಉತ್ತೇಜಿಸಬೇಕೆಂದು.”ಡಾ. ತುಕಾರಾಂ ಪೂಜಾರಿ ಹೇಳಿದರು.